ಉಡುಪಿ(ಮಾ.28): ಕೊರೋನಾ ವೈರಸ್‌ ಹರಡುವ ಭೀತಿಯಿಂದ ಉಡುಪಿ ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ಶುಕ್ರವಾರ ಜುಮ್ಮಾ ನಮಾಜ್‌ ರದ್ದುಗೊಳಿಸಲಾಗಿತ್ತು. ಮುಸಲ್ಮಾನರು ತಂತಮ್ಮ ಮನೆಯಲ್ಲಿಯೇ ಜುಮ್ಮಾ ನಮಾಜ್‌ ಸಲ್ಲಿಸಿದರು.

ಪ್ರತಿ ಮಸೀದಿಯಲ್ಲಿ 800ಕ್ಕೂ ಅಧಿಕ ಮಂದಿ ಶುಕ್ರವಾರ ನಮಾಜ್‌ಗೆ ಸೇರುತ್ತಾರೆ ಮತ್ತು ತೀರ ಹತ್ತಿರ ಕುಳಿತು ನಮಾಜ್‌ ಮಾಡುತ್ತಾರೆ. ಈ ಸಂದರ್ಭದಲ್ಲಿ ಕೊರೋನಾ ವೈರಸ್‌ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.

ಉಡುಪಿ ಲಾಕ್‌ಡೌನ್‌: ಕುಡಿಯೋಕೆ ಮದ್ಯ ಸಿಗದೆ ವ್ಯಕ್ತಿ ಆತ್ಮಹತ್ಯೆ

ಜಿಲ್ಲೆಯಲ್ಲಿ ಜನಜಂಗುಳಿಯನ್ನು ತಡೆಯುವುದಕ್ಕಾಗಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಜಿಲ್ಲಾಧಿಕಾರಿ ಅವರ ಸೂಚನೆಯಂತೆ, ಉಡುಪಿ ಖಾಜಿ ಇಬ್ರಾಹಿಂ ಮುಸ್ಲಿಯಾರ್‌ ಬೇಕಲ್‌ ಅವರ ಸೂಚನೆಯಂತೆ ಎಲ್ಲ ಮಸೀದಿಗಳಿಗೆ ಶುಕ್ರವಾರ ಬೀಗ ಹಾಕಲಾಗಿದ್ದು, ಸಾಮೂಹಿಕ ಪ್ರಾರ್ಥನೆಯನ್ನು ರದ್ದುಗೊಳಿಸಲಾಗಿತ್ತು. ದೇವಸ್ಥಾನ ಮತ್ತು ಚರ್ಚುಗಳಲ್ಲಿ ಕಳೆದ ವಾರವೇ ಸಾಮೂಹಿಕ ಪ್ರಾರ್ಥನೆ, ಪೂಜೆ ಇತ್ಯಾದಿಗಳನ್ನು ರದ್ದುಗೊಳಿಸಲಾಗಿದೆ.