ಉಡುಪಿ(ಮಾ.28): ಕುಡಿಯಲು ಮದ್ಯ ಸಿಗದೆ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆಮಾಡಿಕೊಂಡ ಘಟನೆ ಗುರುವಾರ ದುರ್ಗಾ ಗ್ರಾಮದ ತೆಳ್ಳಾರು ಬೆದ್ರಪಲ್ಕೆ ಎಂಬಲ್ಲಿ ನಡೆದಿದೆ.

ದುರ್ಗಾ ಸ್ಥಳೀಯ ನಿವಾಸಿ ನಾಗೇಶ್‌ ಆಚಾರ್ಯ (37) ಎಂಬುವವರು ಮನೆಯ ಹಿಂಬದಿಯ ಮಲಗುವ ಕೋಣೆಯ ಜಂತಿಗೆ ಲುಂಗಿ ಕಟ್ಟಿನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಲಾಕ್‌ಡೌನ್‌ನಿಂದ ಎಲ್ಲಾ ಅಂಗಡಿಗಳು ಬಂದ್; ಮದ್ಯ ಸಿಗದೇ ವ್ಯಕ್ತಿ ಆತ್ಮಹತ್ಯೆ!

ಈತ ವಿಪರೀತ ಮದ್ಯದ ಚಟ ಹೊಂದಿದ್ದು, ಸುಮಾರು ಒಂದು ವಾರದಿಂದ ಮದ್ಯ ಸಿಗದೆ ಮನನೊಂದು ಆತ್ಮಹತ್ಯೆ ಮಾಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.