ಬೆಳಗಾವಿ(ಏ.06): ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮ ದೇವಿಯ ದವನದ ಹುಣ್ಣಿಮೆಯ ಜಾತ್ರೆಯ ಮೇಲೂ ಮಹಾಮಾರಿ ಕೊರೋನಾ ಕಾರ್ಮೋಡ ಬಿಸಿ ತಟ್ಟಿದೆ.

ಏ. 7 ಮತ್ತು 8 ರಂದು ನಡೆಯಬೇಕಿದ್ದ ದವನದ ಹುಣ್ಣಿಮೆಯ ಜಾತ್ರೆ ಅದ್ಧೂರಿ ಆಚರಣೆಗೆ ದೇವಸ್ಥಾನದ ಆಡಳಿತ ಮಂಡಳಿ ಬ್ರೇಕ್‌ ಹಾಕಿದೆ. ಬೆಳಗಾವಿ ಜಿಲ್ಲೆಯಲ್ಲಿ ಮೂರು ಕೊರೋನಾ ಪಾಸಿಟಿವ್‌ ಪ್ರಕರಣ ದೃಢಪಟ್ಟಿರುವುದರಿಂದ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರ ವಹಿಸಲಾಗಿದೆ.

ಸವದತ್ತಿ ಯಲ್ಲಮ್ಮ ದೇವಸ್ಥಾನ ವದಂತಿ ನಂಬಬೇಡಿ: ಆತಂಕದಲ್ಲಿ ಭಕ್ತರು

ಹಾಗಾಗಿ ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಸರಳವಾಗಿ ದವನದ ಹುಣ್ಣಿಮೆಯ ಜಾತ್ರೆಯನ್ನು ಆಚರಿಸಲಾಗುತ್ತಿದೆ. ಅದ್ಧೂರಿ ಕಾರ್ಯದ ಬದಲಾಗಿ ದೇವಸ್ಥಾನದ ಅರ್ಚಕರು, ಆಡಳಿತ ಮಂಡಳಿ ಸದಸ್ಯರು, ಹಾಗೂ ಕೆಲ ಹಿರಿಯರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಪೂಜೆ, ಪುನಸ್ಕಾರಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮನವಿ ಮಾಡಿದ್ದಾರೆ.