ಸ್ಯಾಂಡಲ್‌ವುಡ್‌ ರಾಕಿಂಗ್ ಕಪಲ್‌ನ ಮುದ್ದಿನ ಪುತ್ರಿ ಐರಾ ಯಶ್ ತಾತ-ಅಜ್ಜಿ ಮತ್ತು ಅಮ್ಮನ ಜೊತೆ ಬಾಲ್ಕಾನಿಯಲ್ಲಿ ನಿಂತು, ಮೋದಿ ನೀಡಿದ ಅಭಿಯಾನಕ್ಕೆ ಕೈ ಜೋಡಿಸಿದ್ದಾಳೆ. ಕೊರೋನಾ ವೈರಸ್ ವಿರುದ್ಧ ಹೋರಾಡಲು ದೇಶವೇ ಸಜ್ಜಾಗಬೇಕಿದ್ದು, ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಅಲ್ಲದೇ ಸಂಜೆ 5 ಗಂಟೆಗೆ ಎಲ್ಲರೂ ಒಟ್ಟಾಗಿ ಚಪ್ಪಾಳೆ ತಟ್ಟಿ, ಒಗ್ಗಟನ್ನು ಪ್ರದರ್ಶಿಸೋಣ ಎಂದಿದ್ದರು. ಇದಕ್ಕೆ ಜತೆಗೂಡಿದ ಭಾರತೀಯ ಜನತೆಯೊಂದಿಗೆ ಐರಾ ಸಹ ಕೈ ಜೋಡಿಸಿದ್ದಾರೆ. ಅಜ್ಜ ಅಜ್ಜಿಯೊಂದಿಗೆ ಚಪ್ಪಾಳೆ ತಟ್ಟಿದ್ದಾಳೆ.  ಈ ವಿಡಿಯೋವನ್ನು ರಾಧಿಕಾ ಪಂಡಿತ್‌ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಬೇಸಿಗೆಗೆ Summer Cut; ಇದೇನಪ್ಪಾ ಅಪ್ಪಂಗೆ ಹಿಂಗ್‌ ಕೇಳೋದಾ ಐರಾ?

ಕೊರೋನಾ ವೈರಸ್‌ ಹೋಗಲಾಡಿಸಲು ಸತತ 24/7 ಕಾರ್ಯ ನಿರ್ವಹಿಸುತ್ತಿರುವ ವಾರಿಯರ್ಸ್‌ಗೆ ಸಾಥ್‌ ನೀಡಲು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಮಾರ್ಚ್‌ 22 ಸಂಜೆ 5 ಗಂಟೆಗೆ ಇರುವಲ್ಲಿಯೇ ಚಪ್ಪಾಳೆ ತಟ್ಟುವ ಮೂಲಕ ಗೌರವಿಸಬೇಕೆಂದು ಮನವಿ ಮಾಡಿಕೊಂಡಿದ್ದರು. ಈ ಕರೆಯಲ್ಲಿ ಸೆಲೆಬ್ರಿಟಿಗಳು ಹಾಗೂ ಸಾರ್ವಜನಿಕರೂ ಪಾಲ್ಗೊಂಡಿದ್ದರು. ಇದಕ್ಕೆ ದೇಶದೆಲ್ಲೆಡೆಯಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿತ್ತು. 

'kissable head' ಜೊತೆ ಮಿಸ್ಟರ್‌ ಆ್ಯಂಡ್ ಮಿಸಸ್‌ ರಾಮಚಾರಿ!

'ವಾರಿಯರ್ಸ್‌ಗೆ ಚಪ್ಪಾಳೆ ತಟ್ಟಲು ಈ ಪುಟ್ಟ ಕೈಗಳು ನಮ್ಮೊಂದಿಗೆ ಸೇರಿಕೊಂಡಿದೆ. ನಾವೆಲ್ಲರೂ ಒಂದು ರಾಷ್ಟ್ರವಾಗಿ ನಮಗಾಗಿ ಕೆಲಸ ಮಾಡುವ ಜನರಿಗೆ ಸಮಸ್ಕರಿಸೋಣ. ಜವಾಬ್ದಾರಿಯುತ ನಾಗರಿಕರಾಗಿರಿ. ಸ್ಟೇ ಸೇಫ್ ' ಎಂದು ರಾಧಿಕಾ ಬರೆದುಕೊಂಡಿದ್ದಾರೆ.