ರಾಯಚೂರು(ಮಾ.25): ಕೊರೋನಾ ಮಾರಿಯನ್ನ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ(ಮಂಗಳವಾರ) ಮಧ್ಯ ರಾತ್ರಿಯಿಂದ ಏಪ್ರಿಲ್ 14 ರವೆಗೆ ಇಡೀ ದೇಶವೇ ಲಾಕ್‌ಡೌನ್‌ ಆಗಲಿದೆ ಘೋಷಿಸಿದ್ದಾರೆ.

 

ಇನ್ನು ಈ ಬಗ್ಗೆ ಮಾತನಾಡಿದ ರಾಯಚೂರು ನಗರದ ಬಿಜೆಪಿ ಶಾಸಕ ಡಾ. ಶಿವರಾಜ ಪಾಟೀಲ್ ಅವರು, ಈಗಾಗಲೇ ನಾಲ್ಕು ದಿ‌ನಗಳಿಂದ ರಾಯಚೂರು ಲಾಕ್ ಡೌನ್‌ ಆಗಿದೆ. ಮುಂದೆ ಏಪ್ರಿಲ್ 14 ರವರೆಗೂ ಲಾಕ್ ಡೌನ್ ಆಗಲಿದೆ. ರಾಯಚೂರು ಜನತೆಗೆ ಆಸ್ಪತ್ರೆ, ದಿನಸಿ, ತರಕಾರಿ ಏನೇ ಸಮಸ್ಯೆ ಇದ್ದರೂ ನನಗೆ ಫೋನ್ ಮಾಡಿ(9448125546) ನಾನು ನಿಮ್ಮ ಮನೆಗೆ ತಲುಪಿಸುವ ಪ್ರಮಾಣಿಕ‌ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. 

ಲಾಕ್‌ಡೌನ್‌ ಎಫೆಕ್ಟ್‌: ತರಕಾರಿ ಬೆಲೆ ಬೆಳಗ್ಗೆ ಏರಿಕೆ, ಸಂಜೆ ಇಳಿಕೆ!

ರಾಯಚೂರಿನಲ್ಲಿ ಇಲ್ಲಿಯವರೆಗೂ ಕೊರೊನಾ ಸೋಂಕಿತರ ಪ್ರಕರಣಗಳು ವರದಿಯಾಗಿಲ್ಲ. ಆದರೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಫೇಸ್‌ಬುಕ್‌ ನಲ್ಲಿ ವಿಡಿಯೋ ಮಾಡಿ ಹಾಕಿದ್ದಾರೆ.