ಅಥಣಿ(ಏ.08): ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ನಾಲ್ಕು ಕೊರೋನಾ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಡೀ ಪಟ್ಟಣವನ್ನೇ ಬಫರ್‌ ಝೋನ್‌ ಆದೇಶ ಮಾಡಿದ್ದರೂ ಅಲ್ಲಿಂದ ಓರ್ವ ಗರ್ಭಿಣಿ ಅಥಣಿ ಸರ್ಕಾರಿ ದವಾಖಾನೆಯಲ್ಲಿ ಪ್ರತ್ಯಕ್ಷವಾಗಿದ್ದು ಎಲ್ಲರಲ್ಲಿ ಆಶ್ಚರ್ಯ ಮೂಡಿಸಿದೆ.

ಹೌದು, ಮಹಿಳೆ ತುಂಬು ಗರ್ಭಿಣಿಯಾಗಿದ್ದು, ಉಗಾರ ದವಾಖಾನೆಗೆ ವಾಹನ ಮಾಡಿಕೊಂಡು ಹೋಗಿದ್ದಾರೆ. ಆಗ ಅಲ್ಲಿ ವೈದ್ಯ ಸಿಬ್ಬಂದಿ ಸಮರ್ಪಕವಾಗಿ ಸ್ಪಂದಿಸದ ಹಿನ್ನೆಲೆ ಅಥಣಿ ಸರ್ಕಾರಿ ದವಾಖಾನೆಗೆ ಹೋಗಿ ಎಂದು ಯಾರೋ ಹೇಳಿದ್ದರಿಂದ ಕೂಡಲೇ ಅಥಣಿ ಆಸ್ಪತ್ರೆಗೆ ವೈದ್ಯರ ಶಿಫಾರಸ್‌ ಪತ್ರವಿಲ್ಲದೆ ನೇರವಾಗಿ ಬಂದಿದ್ದಾರೆ. ಇದರಿಂದ ವೈದ್ಯರು ತಾತ್ಕಾಲಿಕ ವೈದ್ಯಕೀಯ ಚಿಕಿತ್ಸೆ ನೀಡಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ.

ಬೆಳಗಾವಿಯಲ್ಲಿ ಮತ್ತೆ ನಾಲ್ವರಿಗೆ ಕೊರೋನಾ ದೃಢ: ಕುಡಚಿಯಲ್ಲಿ ಹೈಅಲರ್ಟ್‌

ಕುಡಚಿ ಇಡೀ ಗ್ರಾಮದ ಮೂರು 3 ಕಿಮೀ. ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್‌ ಇರಲಿದೆ. ಯಾರೂ ಕುಡಚಿ ಪ್ರವೇಶಿಸುವಂತಿಲ್ಲ. ಹೊರಗೆ ಬರುವಂತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಅವರು ಖಾಸಗಿ ವಾಹನ ಮಾಡಿಕೊಂಡು ಅಥಣಿಗೆ ಬಂದಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.