ಬೆಂಗಳೂರು(ಮಾ.27): ಲಂಚ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತಮ್ಮ ವಿರುದ್ಧ ತನಿಖೆ ನಡೆಸುವಂತೆ ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆಯಲು ತೀರ್ಮಾನಿಸಿದ್ದಾರೆ.

ಲಾಕ್‌ಡೌನ್‌ ನಡುವೆ ಅಂಗಡಿಗಳನ್ನು ತೆರೆಯುವುದಕ್ಕೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಲಂಚ ತೆಗೆದುಕೊಂಡಿದ್ದಾರೆ ಎಂದು ಡಿಸಿಎಂ ಅಶ್ವತ್ಥ್‌ ನಾರಾಯಣ್ ಆರೋಪಿಸಿದ ಹಿನ್ನೆಲೆಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.

ಕೊರೋನಾ ಗದ್ದಲದಲ್ಲಿ ಪೊಲೀಸ್ ಕಮೀಷನರ್ ವಿರುದ್ಧ ಹೊಸ ಬಾಂಬ್ ಸಿಡಿಸಿದ ಡಿಸಿಎಂ

ಬೆಂಗಳೂರು ಪೊಲೀಸ್ ಆಯುಕ್ತರ ವಿರುದ್ದ ಡಿಸಿಎಂ ಗಂಭೀರ ಆರೋಪ ಹಿನ್ನಲೆ ತಮ್ಮ ವಿರುದ್ದ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಕಮಿಷನರ್ ನಿರ್ಧಾರ ಮಾಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪತ್ರ ಬರೆಯಲು ನಿರ್ಧರಿಸಿದ್ದಾರೆ.

ಉಡುಪಿ ಜಿಲ್ಲೆಯೇ ಹೋಂ ಕ್ವಾರಂಟೈನ್‌ ತೆಕ್ಕೆ​ಗೆ!

ಲಾಕ್ ಡೌನ್ ಆದೇಶ ನಿರ್ವಹಣೆ ಬಗ್ಗೆ ಆರೋಪಿಸಿ ಡಿಸಿಎಂ ಅಶ್ವತ್ ನಾರಾಯಣ್ ಅವರು ಭಾಸ್ಕರ್ ರಾವ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೆಲ ಶಾಪ್‌ಗಳನ್ನು ತೆರೆಯಲು ಹಣ ಪಡೆದು ಅನುಕೂಲ ಮಾಡಿದ್ದೀರಿ ಎನ್ನುವ ಗಂಭೀರ ಆರೋಪಿಸಿದ್ದರು. ಈ ಸಂಬಂಧ ಹುದ್ದೆಯಿಂದ ಬಿಡುಗಡೆ ಮಾಡುವಂತೆ  ಸಿಎಂಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕೋರಿದ್ದಾರೆ.

ಕಣ್ಣಿಗೆ ಕಾಣ ಸಿಗದಿದ್ದ ಪ್ರಾಣಿಗಳೆಲ್ಲ ಹಾಜರ್..! ಮೌನಗೊಳಿಸುತ್ತೆ ಮುಗ್ಧ ಪ್ರಾಣಿಗಳ ಚಿತ್ರ