ಬೆಂಗಳೂರು, (ಮಾ.26): ಮಹಾಮಾರಿ ಕೊರೋನಾ ವೈರಸ್ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ವ್ಯಾಪಿಸುತ್ತಲೇ ಇದೆ. ಇದರ ನಡುವೆ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವಿರುದ್ಧ ಲಂಚದ ಬಾಂಬ್ ಸಿಡಿಸಿದ್ದಾರೆ.

ಹೌದು...ಇಂದು (ಗುರುವಾರ) ಬೆಂಗಳೂರಿನಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಿಎಂ ಬಿಎಸ್‌ವೈ, ಮಹತ್ವದ ಸಭೆ ನಡೆಸಿದರು. ಈ ವೇಳೆ ಭಾಸ್ಕರ್ ರಾವ್ ಅವರು ಕಮಿಷನ್ (ಲಂಚ) ಪಡೆದು ಕೆಲ ಶಾಪ್‌ಗಳನ್ನ ಓಪನ್ ಮಾಡಿಸಿದ್ದಾರೆ ಎಂದು ಸಿಎಂ ಮುಂದೆಯೇ ಅಶ್ವಥ್ ನಾರಯಣ ಗಂಭೀರ ಆರೋಪ ಮಾಡಿದ್ದಾರೆ.

ಲಾಕ್‌ಡೌನ್: ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಸಿಎಂ, ಹೊರಗೆ ಬಂದ್ರೆ ಅಷ್ಟೇ ಕಥೆ..!

ಈ ಆರೋಪ ಮಾಡುತ್ತಿದ್ದಂತೆಯೇ ಭಾಸ್ಕರ್ ರಾವ್  ತೀವ್ರ ಆತಂಕಗೊಂಡ ಕಣ್ಣೀರಿಟ್ಟು ಸಭೆಯಿಂದ ಹೊರನಡೆದಿದ್ದಾರೆ. ಅಷ್ಟೇ ಅಲ್ಲದೇ ಆಯುಕ್ತ ಹುದ್ದೆಯಿಂದ ನನ್ನ ಬಿಡುಗಡೆಗೊಳಿಸುವಂತೆ ಸಿಎಂ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಅಶ್ವಥ್ ನಾರಾಯಣ ಮಾಡಿರುವ ಈ ಗಂಭೀರ ಆರೋಪದಿಂದ ಸ್ವತಃ ಸಿಎಂ ಯಡಿಯೂಪರಪ್ಪ ಹಾಗು ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ಶಾಕ್ ಆಗಿದ್ದಾರೆ.  ಮತ್ತೊಂದೆಡೆ ಯಾವುದೋ ಒಂದು ವಿಷಯಕ್ಕೆ ವಿಚಾರಕ್ಕೆ ತಮ್ಮ ಮಾತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಕ್ಕೆ ಅಶ್ವಥ್ ನಾರಾಯಣ ಸೇಡಿ ತೀರಿಸಿಕೊಳ್ಳಲು ಈ ರೀತಿ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಇದು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.

ಬೆಂಗಳೂರು ಪೊಲೀಸ್ ಆಯುಕ್ತರ ವಿರುದ್ದ ಡಿಸಿಎಂ ಗಂಭೀರ ಆರೋಪ ಹಿನ್ನಲೆಯಲ್ಲಿ ತಮ್ಮ ವಿರುದ್ದ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಕಮಿಷನರ್ ನಿರ್ಧರಿಸಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಈ ಬಗ್ಗೆ ನಿರ್ಧಾರ ಮಾಡಿದ್ದು, ಲಾಕ್ ಡೌನ್ ಆದೇಶ ನಿರ್ವಹಣೆ ಬಗ್ಗೆ ಆರೋಪಿಸಿ ವಾಗ್ದಾಳಿ ನಡೆಸಿದ್ದ ಡಿಸಿಎಂ ಅಶ್ವತ್ ನಾರಾಯಣ್‌ಗೆ ತಿರುಗೇಟು ನೀಡಿದ್ದಾರೆ.

ಕೆಲ ಶಾಪ್‌ಗಳನ್ನು ತೆರೆಯಲು  ಹಣ ಪಡೆದು ಅನುಕೂಲ ಮಾಡಿದ್ದೀರಿ ಎನ್ನುವ ಗಂಭೀರ ಆರೋಪ ಹಿನ್ನಲೆ ಪ್ರತಿಕ್ರಿಯಿಸಿ, ಡಿಸಿಎಂ ಆರೋಪದಿಂದ ಅತೀವ ನೋವಾಗಿದೆ. ಹುದ್ದೆಯಿಂದ ಬಿಡುಗಡೆ ಮಾಡುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಿಎಂಗೆ ಕೋರಿದ್ದಾರೆ.