ಮಂಗಳೂರು(ಮಾ.26): ಲಾಕ್‌ಡೌನ್‌ ಘೋಷಿಸಿದ ಬೆನಲ್ಲೇ ಸಿಟಿಯಲ್ಲಿ ಖಾಕಿ ಪಡೆ ರೌಂಡ್ಸ್ ಹಾಕುತ್ತಿದ್ದರೆ, ಹಳ್ಳಿಗಳಲ್ಲಿ ಜನರೇ ಸ್ವತಃ ಎಚ್ಚೆತ್ತುಕೊಂಡು ತಮ್ಮ ಗ್ರಾಮವನ್ನು ಕಾಪಾಡೋ ನಿಟ್ಟಿನಲ್ಲಿ ಕಂಕಣಬದ್ಧರಾಗಿ ನಿಂತಿದ್ದಾರೆ. ಮುಳ್ಳುಬೇಲಿ, ಕಲ್ಲು ಹಾಕೋದು, ರಸ್ತೆ ಅಗಿಯೋದು ಎಲ್ಲ ಮಾಡಿದ್ದಾರೆ. ಕೇರಳ ಕರ್ನಾಟಕ ಗಡಿಯಲ್ಲೇನು ಮಾಡಿದ್ದಾರೆ ನೋಡಿ

ಕೇರಳ - ಕರ್ನಾಟಕ ಗಡಿಭಾಗವಾದ ಪಾತೂರಿನಲ್ಲಿ ರಸ್ತೆಗೆ ಮಣ್ಣು ಹಾಕಿ ಬಂದ್ ಮಾಡಲಾಗಿದೆ..ಯಾವುದೇ ವಾಹನಕ್ಕೆ ಪ್ರವೇಶವಿಲ್ಲ. ಯಾವ ವಾಹನ ಹೊರಗೆ ಹೋಗುವಂತೆಯೂ ಇಲ್ಲ.

ಅನಗತ್ಯವಾಗಿ ಓಡಾಡ್ಬೇಡಿ! ರಸ್ತೆಗಿಳಿದು ಲಾಠಿ ಬೀಸುತ್ತಿವೆ ತುಂಗಾ ಪಡೆ

ಲಾಕ್ ಡೌನ್ ಮುಗಿಯುವ ತನಕ ಕರ್ನಾಟಕ- ಕೇರಳ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದ್ದು, ಈಗಾಗಲೇ ಕೇರಳ ಸಂಪರ್ಕಿಸುವ 16 ದಾರಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ವಾಹನ ಬಿಡಿ, ನಡೆದು ಹೋಗುವವರನ್ನೂ ಗಡಿ ದಾಟಲು ಬಿಡುತ್ತಿಲ್ಲ.