Asianet Suvarna News Asianet Suvarna News

ಕೊರೋನಾ ಆತಂಕದ ಮಧ್ಯೆಯೂ ಬ್ಯಾಂಕ್‌ನಲ್ಲಿ ಜನರ ನೂಕು ನುಗ್ಗಲು!

ಬ್ಯಾಂಕ್‌ ಸಿಬ್ಬಂದಿಯ ಮಾತು ಕೇಳದ ಗ್ರಾಹಕರು: ಸಾಮಾಜಿಕ ಅಂತರದ್ದೇ ಸಮಸ್ಯೆ| ಕೊಪ್ಪಳ ಜಿಲ್ಲೆಯ ದೋಟಿಹಾಳ ಗ್ರಾಮದಲ್ಲಿರುವ ನಡೆದ ಘಟನೆ| ಸರದಿ ಸಾಲಿನಲ್ಲಿ ನಿಲ್ಲಲು ನೂಕು ನುಗ್ಗಲು| ಸಾಮಾಜಿಕ ಅಂತರ ಕಾಯ್ದುಕೊಂಡು ಬ್ಯಾಂಕಿನಲ್ಲಿ ವ್ಯವಹರಿಸುವಂತೆ ಮನವಿ ಮಾಡಿದರೂ ಸಹ ಜನರು ಕೇಳುತ್ತಿಲ್ಲ| 

People did not Maintain Social Distance in Koppal District
Author
Bengaluru, First Published Apr 4, 2020, 8:24 AM IST

ದೋಟಿಹಾಳ(ಏ.04): ಕೊರೋನಾ ವೈರಸ್‌ ಸೋಂಕು ಪ್ರಕರಣಗಳು ರಾಜ್ಯದಲ್ಲಿ 100ಕ್ಕೂ ಅಧಿಕವಾಗಿವೆ ಆದರೂ ಸಹ ಸಾರ್ವಜನಿಕರಿಗೆ ಸಾಮಾಜಿಕ ಅಂತರದ ಮತ್ತು ಕೊರೋನಾ ವೈರಸ್‌ ಕುರಿತು ಅರಿವು ಬರುತ್ತಿಲ್ಲ.

ದೋಟಿಹಾಳ ಗ್ರಾಮದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ (ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌) ಇಲ್ಲಿಗೆ ಪ್ರತಿದಿನ ನೂರಾರು ಗ್ರಾಹಕರು ಬಂದು ವ್ಯವಹರಿಸುತ್ತಾರೆ. ಆದರೆ, ಇವರು ಯಾರು ಯಾವುದೇ ರೀತಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿಲ್ಲ. ನೂರಾರು ಗ್ರಾಹಕರು ಒಮ್ಮಿಂದೊಮ್ಮೆಲೆ ಬ್ಯಾಂಕಿನ ಒಳಗಡೆ ಆಗಮಿಸುವುದರಿಂದ ಬ್ಯಾಂಕಿನಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ದೊಡ್ಡ ತಲೆನೋವಾಗಿದೆ.

ತಬ್ಲಿಘಿನಲ್ಲಿ ಭಾಗಿಯಾದವರನ್ಯಾಕೆ ಪರೀಕ್ಷೆಗೊಳಪಡಿಸುತ್ತಿಲ್ಲ? ಡಿಸಿ ನಿರ್ಲಕ್ಷ್ಯಕ್ಕೆ ಜನರ ಆಕ್ರೊಶ

ಸುಮಾರು 12 ಹಳ್ಳಿಗಳಿಗೆ ಇರುವದೊಂದೆ ಈ ಬ್ಯಾಂಕ್‌. ಪ್ರತಿನಿತ್ಯ ನೂರಾರು ಗ್ರಾಹಕರು ಆಗಮಿಸುತ್ತಾರೆ. ಈ ಬ್ಯಾಂಕಿನ ಸಿಬ್ಬಂದಿಗಳು ಗ್ರಾಹಕರಿಗೆ ಎಲ್ಲರೂ ಒಟ್ಟಿಗೆ ಬರುವುದರಿಂದ ಕೆಲಸಕ್ಕೆ ತೊಂದರೆಯಾಗುತ್ತದೆ. ಜೊತೆಗೆ ಕೊರೋನಾ ವೈರಸ್‌ ಹರಡುವ ಸಾಧ್ಯತೆಯಿದ್ದು, ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ಬ್ಯಾಂಕಿನಲ್ಲಿ ವ್ಯವಹರಿಸುವಂತೆ ಮನವಿ ಮಾಡಿದರೂ ಸಹ ಜನರು ಇದನ್ನು ಲೆಕ್ಕಿಸುತ್ತಿಲ್ಲ. ಗ್ರಾಹಕರು ಬ್ಯಾಂಕಿನ ಒಳಗಡೆ ಹೋಗುವ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾದ ಹಿನ್ನಲೆಯಲ್ಲಿ ಬ್ಯಾಂಕ್‌ ಸಿಬ್ಬಂದಿಗಳು ಪೂಲೀಸರನ್ನು ಕರೆಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸರದಿಯಲ್ಲಿ ನಿಂತು ವ್ಯವಹರಿಸುವಂತೆ ಸೂಚಿಸಿದ ಘಟನೆ ನಡೆಯಿತು.
 

Follow Us:
Download App:
  • android
  • ios