ತಬ್ಲಿಘಿನಲ್ಲಿ ಭಾಗಿಯಾದವರನ್ಯಾಕೆ ಪರೀಕ್ಷೆಗೊಳಪಡಿಸುತ್ತಿಲ್ಲ? ಡಿಸಿ ನಿರ್ಲಕ್ಷ್ಯಕ್ಕೆ ಜನರ ಆಕ್ರೊಶ
ದೇಶವನ್ನೇ ಬೆಚ್ಚಿಬೀಳಿಸಿರುವ ತಬ್ಲಿಘಿ ಪ್ರಕರಣದ ನಂಟು ಕೊಪ್ಪಳಕ್ಕುಂಟು| ಕೊಪ್ಪಳ ಜಿಲ್ಲೆಯಿಂದ ತಬ್ಲಿಘಿ ಜಮಾತ್‌ನಲ್ಲಿ ಭಾಗಿಯಾಗಿದ್ದು 14 ಅಲ್ಲ, 22 ಆಘಾತಕಾರಿ ಅಂಶ| ಭಾಗಿಯಾದವರ ಆರೋಗ್ಯ ತಪಾಸಣೆಯಾಗಿದ್ದು, ಕೊರೋನಾ ಲಕ್ಷಣಗಳು ಇಲ್ಲ. ಆದರೆ, ಸರ್ಕಾರದ ನಿರ್ಬಂಧದಲ್ಲಿಡಲಾಗಿದೆ|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಏ.04): ದೆಹಲಿಯ ಹಜರತ್ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲಿಘಿ ಜಮಾತ್‌ನಲ್ಲಿ ಕೊಪ್ಪಳದವರು ಭಾಗಿಯಾಗಿರುವುದಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಭಾಗಿಯಾಗಿದ್ದು 14 ಅಲ್ಲ, 22 ಎನ್ನುವ ಅಘಾತಕಾರಿ ಅಂಶ ಹೊರಬಿದ್ದಿದೆ.
ಜಿಲ್ಲಾಡಳಿತವು ಸ್ಥಳೀಯವಾಗಿ ಪೊಲೀಸ್ ಇಲಾಖೆಯ ಮುಖಾಂತರ ಶೋಧಿಸಲಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿ, ಕಾರಟಗಿ ಹಾಗೂ ಕುಷ್ಟಗಿ ತಾಲೂಕಿನ ಒಟ್ಟು 22 ಜನರು ಮಾರ್ಚ್ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎನ್ನುವುದು ಗೊತ್ತಾಗಿದೆ.
ಕೊರೋನಾ ಮಧ್ಯೆಯೂ ಧರ್ಮಸಭೆ: ದೆಹಲಿ ನಿಜಾಮುದ್ದೀನ್ ವ್ಯಾಪ್ತಿಯಲ್ಲಿ ಕೊಪ್ಪಳದ 14 ಜನ
ಅವರಲ್ಲಿ ಒಬ್ಬರು ಫೆ. 13ರಂದು ಹಾಗೂ ಉಳಿದ 21 ಜನರಲ್ಲಿ 12 ಜನರು ಮಾ. 10ರಂದು ಹಾಗೂ 9 ಜನರು ಮಾ. 12ರಂದು ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದಾರೆ. ಅವರೆಲ್ಲರ ಆರೋಗ್ಯ ತಪಾಸಣೆಯಾಗಿದ್ದು, ಲಕ್ಷಣಗಳು ಇಲ್ಲ. ಆದರೆ, ಸರ್ಕಾರದ ನಿರ್ಬಂಧದಲ್ಲಿಡಲಾಗಿದೆ.
ಹಲವು ಅನುಮಾನಕ್ಕೆ ದಾರಿ:
ಇವರು ತಬ್ಲಿಘಿ ಜಮಾತ್‌ನಲ್ಲಿ ಭಾಗವಹಿಸಿದ್ದರೂ ಬಂದ ಮೇಲೆ ನಾವು ಭಾಗವಹಿಸಿದವರೆಲ್ಲರ ಆರೋಗ್ಯ ತಪಾಸಣೆಯಾಗಿದ್ದು, ಲಕ್ಷಣಗಳು ಇಲ್ಲ. ಆದರೆ, ಸರ್ಕಾರದ ನಿರ್ಬಂಧದಲ್ಲಿಡಲಾಗಿದೆ.
ಪರೀಕ್ಷೆಗೆ ಕಳುಹಿಸಿ:
ಕೊರೋನಾ ನಿಯಂತ್ರಣಕ್ಕೆ ಹಗಲಿರಳು ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಈ ವಿಷಯದಲ್ಲಿ ಯಾಕೆ ಮೀನಮೇಷ ಮಾಡುತ್ತಿದ್ದಾರೆ ಎನ್ನುವುದೇ ಗೊತ್ತಾಗುತ್ತಿಲ್ಲ. ಏನೇ ಆಗಲಿ, ತಬ್ಲಿಘಿ ಜಮಾತ್‌ನಲ್ಲಿ ಭಾಗವಹಿಸಿದವರ ಗಂಟಲು ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡುವುದು ಸೂಕ್ತ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. ಈಗಾಗಲೇ ಅವರನ್ನು ಹೋಂ ಕ್ವಾರಂಟೈನ್ ಸಹ ಬದಲಾಯಿಸಿ, ಗಂಗಾವತಿಯ ವಸತಿ ನಿಲಯವೊಂದರಲ್ಲಿ ಪ್ರತ್ಯೇಕವಾಗಿ ಇಡಲಾಗಿದೆ. ನೆಗೆಟಿವ್ ವರದಿ ಬಂದು 14 ದಿನಗಳ ನಂತರವೂ ಪಾಸಿಟಿವ್ ಆಗಿರುವ ಅದೆಷ್ಟೋ ಉದಾಹರಣೆ ಇವೆ.
ಈ ಬಗ್ಗೆ ಮಾತನಾಡಿದ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಅವರು, ದೆಹಲಿಯ ಹಜರತ್ ನಿಜಾಮುದ್ದೀನ್‌ನಲ್ಲಿ ಆಯೋಜಿಸಲಾಗಿದ್ದ ತಬ್ಲಿಘಿ ಜಮಾತ್‌ನಲ್ಲಿ ಭಾಗವಹಿಸಿದ್ದ ಜಿಲ್ಲೆಯ 22 ಜನರಲ್ಲಿ ಯಾರಲ್ಲೂ ಕೊರೋನಾ ಲಕ್ಷಣಗಳು ಕಂಡುಬಂದಿಲ್ಲ ಎಂದು ಹೇಳಿದ್ದಾರೆ.