ಕಾಡು ಪ್ರಾಣಿ, ಪಕ್ಷಿಗಳಿಗೆ ಸ್ವಚ್ಛಂದವಾಗಿ ವಿಹರಿಸಲು ಪೂರಕ ವಾತಾವರಣ ನಿರ್ಮಿಸಿದ ಕೊರೋನಾ ವೈರಸ್|ಲಾಕ್‌ಡೌನ್‌ ನಿಯಮದಿಂದ ಮನೆಯಿಂದಾಚೆ ಬಾರದ ಜನತೆ| ವಾಹನಗಳ ಸಂಚಾರವಿಲ್ಲದೆ ಸ್ವಚ್ಚಂದವಾಗಿ ವಿಹರಿಸುತ್ತಿರವ ಕಾಡು ಪ್ರಾಣಿಗಳು| 

ರೋಣ(ಏ.02): ಕೊರೋನಾ ವಿಶ್ವಾದ್ಯಂತ ಮಾನವ ಸಂಕುಲದ ನಿದ್ದೆಗೆಡೆಸಿದೆ. ಆದರೆ ಕಾಡು ಪ್ರಾಣಿ, ಪಕ್ಷಿಗಳಿಗೆ ಸ್ವಚ್ಛಂದವಾಗಿ ವಿಹರಿಸಲು ಪೂರಕ ವಾತಾವರಣ ನಿರ್ಮಾಣವಾಗಿದೆ. 

ಲಾಕ್‌ಡೌನ್‌ ನಿಯಮದಿಂದ ಮನೆಯಿಂದಾಚೆ ಬಾರದ ಜನತೆ ಮತ್ತ ಯಾವುದೇ ವಾಹನಗಳು ರಸ್ತೆಗಿಳಿಯದಿದ್ದರಿಂದ ಗುಬ್ಬಿ, ಪಾರಿವಾಳ, ನವಿಲು ಸೇರಿದಂತೆ ವಿವಿಧ ಪ್ರಬೇಧ ಪಕ್ಷಿಗಳು ಸ್ವಚ್ಚಂದವಾಗಿವೆ.

ಕೊರೋನಾ ಬಗ್ಗೆ ಎಚ್ಚೆತ್ತುಕೊಳ್ಳದ ಜನ: APMCಯಲ್ಲಿ ಜನವೋ ಜನ!

ತಾಲೂಕಿನ ಜಿಗಳೂರ ಗ್ರಾಮದ ಪಕ್ಷಿ ಪ್ರಿಯ ಬಸವರಾಜ ಹುನಗುಂದ, ರಮೇಶ ಉಪ್ಪಾರ, ಶರಣಪ್ಪಗೌಡ ಬೇವಿನಕಟ್ಟಿ ಅವರ ಮನೆಯಂಗಳದಲ್ಲಿ ಕಾಳು ಆಯ್ದು ತಿನ್ನಲು, ನೀರು ಕುಡಿಯಲು ನವಿಲುಗಳು ಬರುತ್ತಿರುವುದು ಸಾಕಷ್ಟು ಕುತೂಲಹಕ್ಕೆ ಕಾರಣವಾಗಿದೆ.