Asianet Suvarna News Asianet Suvarna News

ನರಗುಂದದಲ್ಲಿ ನಿಲ್ಲದ ಭೂಕುಸಿತ: ಗುಂಡಿಯಲ್ಲಿ ಸಿಲುಕಿದ್ದ ಎತ್ತು

10 ಅಡಿ ಆಳದಲ್ಲಿ ಸಿಲುಕಿದ್ದ ಎತ್ತು| ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಭೂಕುಸಿತ| ಇಲ್ಲಿಯವರೆಗೆ ಭೂಕುಸಿತದ ಕಾರಣ ಕಂಡು ಹಿಡಿಯಲು ಈ ಭೂಗರ್ಭ ತಜ್ಞರಿಗೂ ಸಾಧ್ಯವಾಗಿಲ್ಲ| ಕೊರೋನಾ ಭೀತಿಯಿಂದ ಜನತೆ ಮನೆ ಬಿಟ್ಟು ಹೊರಗೆ ಬಂದಿಲ್ಲ| ಇಂಥದರಲ್ಲಿ ಪಟ್ಟಣದಲ್ಲಿ ಪದೇ ಪದೇ ಭೂಕುಸಿತವಾಗುತ್ತಿರುವುದು ಜನರಲ್ಲಿ ಮತ್ತಷ್ಟು ಆತಂಕ| 

Ox caught in the Hole in Naragund in Gadag district
Author
Bengaluru, First Published Apr 5, 2020, 10:54 AM IST

ನರಗುಂದ(ಏ.05): ಗದಗ ಜಿಲ್ಲೆಯ ನರಗುಂದದಲ್ಲಿ ಕಳೆದ 2019ರ ಆಗಸ್ಟ್‌ ತಿಂಗಳಿಂದ ಈ ವರೆಗೆ ಅಂತರ್ಜಲ ಹೆಚ್ಚಾಗಿ 40 ಮನೆಗಳಲ್ಲಿ ಭೂ ಕುಸಿತವಾಗಿದೆ.

ಈಗಾಗಲೇ ಪುರಸಭೆ ಅಧಿಕಾರಿಗಳು ಬೆಂಗಳೂರು, ಕೊಪ್ಪಳ, ಗದಗಿನ ಭೂಗರ್ಭ ತಜ್ಞರನ್ನು ಕರೆಯಿಸಿ ಭೂಕುಸಿತ ಪ್ರದೇಶಗಳಗೆ ಭೇಟಿ ಮಾಡಿಸಿದ್ದಾರೆ. ಆದರೆ ಕಾರಣ ಕಂಡು ಹಿಡಿಯಲು ಈ ಭೂಗರ್ಭ ತಜ್ಞರಿಗೆ ಸಾಧ್ಯವಾಗಿಲ್ಲ.
9 ದಿನಗಳಿಂದ ಕೊರೋನಾ ಭೀತಿಯಿಂದ ಜನತೆ ಮನೆ ಬಿಟ್ಟು ಹೊರಗೆ ಬಂದಿಲ್ಲ. ಇಂಥದರಲ್ಲಿ ಪಟ್ಟಣದಲ್ಲಿ ಪದೇ ಪದೇ ಭೂಕುಸಿತವಾಗುತ್ತಿರುವುದು ಮತ್ತಷ್ಟು ಆತಂಕ ತಂದಿದೆ. ಹೊರಗೆ ಬಂದರೆ ಕೊರೋನಾ ಭೀತಿ, ಇನ್ನು ಮನೆಯಲ್ಲಿ ಇದ್ದರೆ ಯಾವ ಸಮಯದಲ್ಲಿ ಭೂಕುಸಿತವಾಗುತ್ತದೆ.

ಹೊರಗೆ ಹೋದ್ರೆ ಕೊರೋನಾ ಭಯ, ಮನೆಯಲ್ಲಿದ್ದರೆ ಭೂ ಕುಸಿತದ ಭೀತಿ!

ಶುಕ್ರವಾರ ಪಟ್ಟಣದ ಹಗದಕಟ್ಟಿ ಓಣಿಯ ಸಿದ್ದಪ್ಪ ಕುರಿ ಎನ್ನುವವರು ತಮ್ಮ ಮನೆ ಮುಂದೆ ಎತ್ತು ಕಟ್ಟಿದ್ದರು. ಮಧ್ಯಾಹ್ನ 3 ಗಂಟೆಗೆ ದಿಢೀರ್‌ ಮನೆ ಮುಂದೆ ಭೂಕುಸಿತವಾಗಿ ಎತ್ತು 10 ಅಡಿ ಆಳದಲ್ಲಿ ಸಿಲುಕಿತ್ತು. ಸುದ್ದಿ ತಿಳಿದು ಪುರಸಭೆ, ಪೊಲೀಸ್‌, ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಜೆಸಿಬಿ ಯಂತ್ರ ಸಹಾಯದಿಂದ ಎತ್ತನ್ನು ಪ್ರಾಣಪಾಯದಿಂದ ಪಾರು ಮಾಡಿದ್ದಾರೆ.
 

Follow Us:
Download App:
  • android
  • ios