ಹಿರೇಕೆರೂರು: ಮಹಾಮಾರಿ ಕೊರೋನಾ ಹೊಡೆದೋಡಿಸಲು ಕೌರವನಿಂದ ಜಾಗೃತಿ!
ಹಳ್ಳಿಹಳ್ಳಿಗೆ ಹೋಗಿ ಅಂತರ ಕಾಯ್ದುಕೊಳ್ಳುವಂತೆ ಹೇಳುತ್ತಿರುವ ಸಚಿವ ಬಿ.ಸಿ. ಪಾಟೀಲ| ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಮಾದರಿಯಾದ ಬಿ.ಸಿ. ಪಾಟೀಲ| ರಾಣಿಬೆನ್ನೂರು, ಹಾವೇರಿ ಎಪಿಎಂಸಿ ಇನ್ನಿತರ ಸ್ಥಳಗಳಿಗೂ ತೆರಳಿ ಪರಿಶೀಲನೆ|
ಹಾವೇರಿ(ಏ.01): ಮಾರಕ ಕೊರೋನಾ ಸೋಂಕಿಗೆ ಹೆದರಿ ಅನೇಕ ಜನಪ್ರತಿನಿಧಿಗಳು ಮನೆಯಿಂದ ಹೊರಗೇ ಬೀಳುತ್ತಿಲ್ಲ. ಆದರೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಚಿವ ಬಿ.ಸಿ. ಪಾಟೀಲ ಹಳ್ಳಿಹಳ್ಳಿಗೆ ಸಂಚರಿಸುವ ಮೂಲಕ ಮಾದರಿಯಾಗಿದ್ದಾರೆ.
ದಿನ ಬೆಳಗಾದರೆ ತಮ್ಮ ಕ್ಷೇತ್ರವೂ ಸೇರಿದಂತೆ ಜಿಲ್ಲಾದ್ಯಂತ ಓಡಾಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೋನಾ ಮುನ್ನೆಚ್ಚರಿಕಾ ಕ್ರಮದ ಬಗ್ಗೆ, ಕೈಗೊಂಡಿರುವ ವ್ಯವಸ್ಥೆ ಬಗ್ಗೆ ಪರಿಶೀಲಿಸುತ್ತಿದ್ದಾರೆ. ಸೋಮವಾರ ಅವರು ಹಿರೇಕೆರೂರು ಪಟ್ಟಣ ಪ್ರದಕ್ಷಿಣೆ ನಡೆಸಿದ್ದಾರೆ .
ಕೊರೋನಾ ಭೀತಿ: ಹೊಟ್ಟೆ ನೋವಿನಿಂದ ನರಳಾಡುತ್ತಿದ್ದ ರೋಗಿಯನ್ನೇ ಮುಟ್ಟದ ವೈದ್ಯರು!
ಚೌಡೇಶ್ವರಿ ನಗರ, ಬಸವೇಶ್ವರ ನಗರ, ಹಿರೇಕೆರೂರು ಮುಖ್ಯ ರಸ್ತೆ, ಕೋಟೆ ಇನ್ನಿತರ ಪ್ರದೇಶಗಳಿಗೆ ಹೋಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದರು. ಅಲ್ಲದೇ ಸ್ವಚ್ಛತೆಗೆ ಆದ್ಯತೆ ನೀಡಬೇಕು, ಎಲ್ಲರೂ ಲಾಕ್‌ಡೌನ್‌ಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಅಲ್ಲದೆ ರಾಣಿಬೆನ್ನೂರು, ಹಾವೇರಿ ಎಪಿಎಂಸಿ ಇನ್ನಿತರ ಸ್ಥಳಗಳಿಗೂ ತೆರಳಿ ಪರಿಶೀಲಿಸಿದ್ದಾರೆ.