ಉಡುಪಿ(ಮಾ.28): ಲಾಕ್‌ಡೌನ್‌ ಆದೇಶ ಉಲ್ಲಂಘಿಸುವ ಮೂಲಕ ನಗರ ಪ್ರದೇಶಗಳು ಸುದ್ದಿಯಲ್ಲಿದ್ದರೆ ತಾಲೂಕಿನ ಗ್ರಾಮೀಣ ಭಾಗಗಳು ಆರಂಭದ ದಿನಗಳಿಂದಲೂ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಗ್ರಾಮೀಣ ಭಾಗದಲ್ಲಿ ಜನ ಸರ್ಕಾರದ ಸೂಚನೆಗಳನ್ನು ಅಕ್ಷರಶಃ ಪಾಲಿಸುವ ಮೂಲಕ ಕೊರೋನಾ ಮಹಾಮಾರಿ ತಮ್ಮ ಊರನ್ನು ಪ್ರವೇಶಿಸದಂತೆ ತಡೆಯುವ ಪ್ರಯತ್ನಗಳಿಗೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿನ ಹೆಚ್ಚಿನ ದಿನಸಿ ಹಾಗೂ ತರಕಾರಿ ಅಂಗಡಿಗಳಲ್ಲಿ ವಸ್ತುಗಳು ಖಾಲಿಯಾಗಿ ಮಾರಾಟ ಭರಾಟೆ ಇಲ್ಲದ್ದರಿಂದ ಅಂಗಡಿಗಳು ಅಂಗಡಿಗಳು ಖಾಲಿ ಖಾಲಿಯಾಗಿದೆ. ಅಂಡಿಗಳಲ್ಲಿ ದಿನಸಿ ಖಾಲಿಯಾಗಿದ್ದರಿಂದ ಗ್ರಾಮೀಣ ಭಾಗದ ಜನರು ಆತಂಕಕ್ಕೊಳಗಾಗಿದ್ದಾರೆ. ತೆರದಿರುವ ಬೆರಳೆಣಿಕೆಯಷ್ಟುಅಂಗಡಿಗಳಲ್ಲಿ ಅಳಿದುಳಿದ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ.

ಉಡುಪಿ ಲಾಕ್‌ಡೌನ್‌: ಕುಡಿಯೋಕೆ ಮದ್ಯ ಸಿಗದೆ ವ್ಯಕ್ತಿ ಆತ್ಮಹತ್ಯೆ

ಜಿಲ್ಲೆಯ ಪ್ರಸಿದ್ಧ ಮೀನು ಮಾರುಕಟ್ಟೆಯಲ್ಲಿ ಒಂದಾಗಿರುವ ಗಂಗೊಳ್ಳಿ ಬಂದರು ಗೇಟ್‌ಗೆ ಬೀಗ ಹಾಕಿದ್ದರಿಂದ ಮಾರಾಟದ ಭರಾಟೆ ಇಲ್ಲದೆ ಬೀಕೋ ಎನ್ನುವ ವಾತಾವರಣ ಇದೆ. ಬೋಟುಗಳನ್ನು ದಂಡೆಯಲ್ಲಿ ಲಂಗರು ಹಾಕಲಾಗಿದೆ. ಆಲೂರು, ಮುಳ್ಳಿಕಟ್ಟೆ, ಗಂಗೊಳ್ಳಿ, ಗುಜ್ಜಾಡಿ ಮುಂತಾದ ಕಡೆಗಳಲ್ಲಿ ಪೊಲೀಸ್‌ ಸಿಬ್ಬಂದಿಗಳನ್ನೊಳ್ಳಗೊಂಡ ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗಿದೆ.

ಲಾಕ್‌ಡೌನ್‌ನಿಂದ ಎಲ್ಲಾ ಅಂಗಡಿಗಳು ಬಂದ್; ಮದ್ಯ ಸಿಗದೇ ವ್ಯಕ್ತಿ ಆತ್ಮಹತ್ಯೆ!

ಈಗಾಗಲೇ ಎಪಿಎಂಸಿ ಅಧ್ಯಕ್ಷರ ಜೊತೆ ಸಹಾಯಕ ಕಮಿಷನರ್‌ ಮಾತನಾಡಿದ್ದಾರೆ. ಎಪಿಎಂಸಿ ಅಧ್ಯಕ್ಷರಿಗೆ ಸರಿಯಾದ ಸೂಚನೆ ಕೊಟ್ಟಿದ್ದೇವೆ. ದಿನಸಿ ವಸ್ತುಗಳನ್ನು ತುಂಬಿರುವ ವಾಹನಗಳ ಓಡಾಟಕ್ಕೆ ಅನುಮತಿ ಕೊಡುತ್ತೇವೆ. ದಿನಸಿ ವಸ್ತುಗಳು ತುಂಬಿರುವ ಲಾರಿಗಳನ್ನು ತಡೆಯಬೇಡಿ ಎಂದು ಈಗಾಗಲೇ ಎಸ್ಪಿಯವರಿಗೂ ಸೂಚನೆ ನೀಡಿದ್ದೇನೆ. ಯಾರಿಗೂ ದಿನಸಿ ಕೊರತೆಯಾಗುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ದಿನಸಿ ವಸ್ತುಗಳನ್ನು ತೆಗೆದುಕೊಂಡು ಹೋಗುವ ಬಗ್ಗೆ ಸರಿಯಾದ ದಾಖಲೆ ಪತ್ರಗಳನ್ನು ಇಟ್ಟುಕೊಂಡರೆ ಪೊಲೀಸರು ತಡೆಯೋದಿಲ್ಲ. ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯ ಒಳಗೆ ನಗರದಿಂದ ಗ್ರಾಮೀಣ ಭಾಗಕ್ಕೆ ವಸ್ತುಗಳನ್ನು ಸರಬರಾಜು ಮಾಡಲು ಅನುಮತಿ ಇದೆ ಎಂದು ಕುಂದಾಪುರ ಎಎಸ್‌ಪಿ ಹರಿರಾಮ್‌ ಶಂಕರ್‌ ತಿಳಿಸಿದ್ದಾರೆ.

ಮಾಸ್ಕ್‌ ಹಾಕದಿದ್ದರೆ ಹೊಡೆಯದಂತೆ ಪೊಲೀಸರಿಗೆ ಸೂಚನೆ ನೀಡಿದ್ದೇವೆ: ಡಿಸಿ

ಕುಂದಾಪುರ: ಎಲ್ಲ ಕಡೆಯೂ ಮಾಸ್ಕ್‌ ಧರಿಸುವ ಅಗತ್ಯವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ, ಹೆಚ್ಚು ಜನರಿರುವ ಕಡೆ ಮಾಸ್ಕ್‌ ಅಗತ್ಯ ಇದೆ. ನಮ್ಮಲ್ಲಿ ಮಾಸ್ಕ್‌ ಅಭಾವವಿದೆ. ಮಾಸ್ಕ್‌ ಧರಿಸದವರಿಗೆ ಹೊಡೆಯಬೇಡಿ ಎಂದು ಈಗಾಗಲೇ ಎಸ್ಪಿಯವರಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದರು.

ಕುಂದಾಪುರದಲ್ಲಿ ಹೋಮ್‌ ಕ್ವಾರಂಟೈನ್‌ ಆಸ್ಪತ್ರೆ

ವಿದೇಶದಿಂದ ಹಾಗೂ ಬೇರೆ ಬೇರೆ ಕಡೆಯಿಂದ ಬರುವವರಿಗೆ ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ 10 ಬೆಡ್‌ಗಳ ಐಸೋಲೇಶನ್‌ ವಾರ್ಡ್‌ ತೆರೆದಿದ್ದು, ಹೆಚ್ಚುವರಿಯಾಗಿ ರಾಷ್ಟ್ರೀಯ ಹೆದ್ದಾರಿ ಬಳಿಯ ಸಂತೆ ಮಾರುಕಟ್ಟೆಸಮೀಪದ ಹಳೆ ಆದರ್ಶ ಆಸ್ಪತ್ರೆಯನ್ನು ಹೋಮ್‌ ಕ್ವಾರಂಟೈನ್‌ ಆಸ್ಪತ್ರೆಯಾಗಿ ಬದಲಾವಣೆ ಮಾಡಲಾಗಿದೆ.

ಶ್ರೀಕಾಂತ ಹೆಮ್ಮಾಡಿ