Asianet Suvarna News Asianet Suvarna News

ಕಳ್ಳರಿಗೂ ಕೊರೋನಾ ಭೀತಿ: ನಿಯಂತ್ರಣಕ್ಕೆ ಬಂದ ಕೊಲೆ, ಕಳ್ಳತನ, ದರೋಡೆ!

ಭಾರತ್‌ ಲಾಕ್‌ಡೌನ್‌| ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳಿಗೂ ಕಡಿವಾಣ| ರಸ್ತೆ ಅಪಘಾತದಲ್ಲಿ ಸಾವಿನ ಪ್ರಕರಣಗಳು ಸಹ ಗಣನೀಯವಾಗಿ ಕಡಿಮೆ| ವಾಹನ ಸಂಚಾರ ಕಡಿಮೆ ಪರಿಣಾಮ ಅಪಘಾತಗಳು ಕಡಿಮೆ|

No Crime Cases in Bengaluru during Bharath LockDown
Author
Bengaluru, First Published Apr 3, 2020, 7:35 AM IST

ಬೆಂಗಳೂರು(ಏ.03): ಕೊರೋನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಲಾಕ್‌ಡೌನ್‌ ಹೇರಿದ ಪರಿಣಾಮ ನಗರದ ಅಪರಾಧ ಚಟುವಟಿಕೆಗಳಿಗೂ ಕಡಿವಾಣ ಬಿದ್ದಿದೆ.

ಈಗಾಗಲೇ ಲಾಕ್‌ಡೌನ್‌ನಿಂದ ವಾಹನ ಓಡಾಟ ವಿರಳವಾದ ಬಳಿಕ ನಗರದ ಟ್ರಾಫಿಕ್‌ ಸಮಸ್ಯೆ ಪರಿಹಾರ ಕಂಡಿತು. ಈಗ ಕೊಲೆ, ಕಳ್ಳತನ, ದರೋಡೆ ಹಾಗೂ ಸುಲಿಗೆ ಸೇರಿ ಅಪರಾಧ ಕೃತ್ಯಗಳಿಗೂ ನಿಯಂತ್ರಣಕ್ಕೆ ಬಂದಿವೆ. ಅಲ್ಲೊಂದು ಇಲ್ಲೊಂದು ದೂರುಗಳ ಹೊರತು ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜನರು ಮನೆಯಲ್ಲೇ ಇದ್ದರೆ ಮತ್ತೊಂದು ಕ್ರಿಮಿನಲ್‌ಗಳಿಗೂ ಸಹ ಕೊರೋನಾ ಆತಂಕ ಎದುರಾಗಿದೆ. ಮನೆಗಳಿಗೆ ಹೋದರೆ ಎಲ್ಲಿ ಸೋಂಕಿಗೆ ತುತ್ತಾಗುತ್ತಿವೆಯೋ ಎಂಬ ಭಯದಿಂದ ಕಳ್ಳರು, ಪಾತಕಲೋಕದಿಂದ ತುಸು ವಿರಾಮ ಪಡೆದಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಕೊರೋನಾ ಭೀತಿ: ನಾವ್‌ ಶವ​ಸಂಸ್ಕಾ​ರ ಮಾಡಲ್ಲ ಎಂದ ಮನೆ​ಯ​ವರು!

ಆದರೆ ನಕಲಿ ಸ್ಯಾನಿಟೈಸರ್‌, ಮಾಸ್ಕ್‌ ಹಾಗೂ ಇನ್ಫ್ರಾಹೆಡ್‌ ಥರ್ಮಾಮೀಟರ್‌ ಸೇರಿದಂತೆ ವೈದ್ಯಕೀಯ ವಸ್ತುಗಳು ನಕಲಿ ದಂಧೆ ಶುರುವಾಗಿದ್ದು, ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಿ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಅಟ್ಟಿದ್ದಾರೆ. ಇನ್ನುಳಿದಂತೆ ರೌಡಿಗಳ ಮೇಲಿನ ದಾಳಿಗಳು ಸಹ ಕಡಿಮೆಯಾಗಿವೆ.

ಸರಗಳ್ಳರ ಪತ್ತೆ ಇಲ್ಲ, ವಾಹನ ಕಳ್ಳರ ಸುಳಿವಿಲ್ಲ:

2019 ಮತ್ತು 20120 ಮಾಚ್‌ರ್‍ ತಿಂಗಳಿನಲ್ಲಿ ವರದಿಯಾಗಿರುವ ಅಪರಾಧ ಪ್ರಕರಣಗಳ ಭಾರಿ ಪ್ರಮಾಣದ ವ್ಯತ್ಯಾಸ ಕಂಡು ಬಂದಿದೆ. ಅದರಲ್ಲೂ ಸರಗಳ್ಳತನ, ವಾಹನ ಕಳ್ಳತನ ಹಾಗೂ ಮನೆಗಳ್ಳತನ ಕೃತ್ಯಗಳಲ್ಲಿ ಇಳಿಕೆ ಕಂಡು ಬಂದಿದೆ. ಅದೇ ರೀತಿ ಕೊಲೆ, ದರೋಡೆ, ರಸ್ತೆ ಅಪಘಾತದಲ್ಲಿ ಸಾವಿನ ಪ್ರಕರಣಗಳು ಸಹ ಗಣನೀಯವಾಗಿ ಕಡಿಮೆಯಾಗಿದೆ. ವಾಹನ ಸಂಚಾರ ಕಡಿಮೆ ಪರಿಣಾಮ ಅಪಘಾತಗಳು ಕಡಿಮೆಯಾಗಿವೆ. ವಾಹನಗಳು ರಸ್ತೆಯಲ್ಲೇ ನಿಂತಿದ್ದರೂ ಕಳ್ಳತನವಾಗುತ್ತಿಲ್ಲ. ಸರಗಳ್ಳರ ಹಾವಳಿ ನಿಂತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಲಾಕ್‌ ಡೌನ್‌ ಮುನ್ನ ದಾಖಲಾದ ಪ್ರಕರಣಗಳು

ಪ್ರಸಕ್ತ ವರ್ಷದ ಮಾಚ್‌ರ್‍ ತಿಂಗಳಿನಲ್ಲಿ ಕೊಲೆ, ವಾಹನ, ಮನೆಗಳ್ಳತನ ಸೇರಿದಂತೆ ಸುಮಾರು 618 ಪ್ರಕರಣಗಳು ದಾಖಲಾಗಿವೆ. ಆದರೆ ಈ ಪ್ರಕರಣಗಳು ಲಾಕ್‌ಡೌನ್‌ ಜಾರಿ ಆರಂಭದ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿವೆ. ಲಾಕ್‌ಡೌನ್‌ ಗಂಭೀರವಾಗಿ ಜಾರಿಗೊಂಡ ಬಳಿಕ ಪ್ರಕರಣಗಳು ಇಳಿಕೆ ಕಂಡಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಅಂಕಿ ಅಂಶದ ವಿವರ ಹೀಗಿದೆ

ಕೃತ್ಯ 2019 ಮಾರ್ಚ್‌ 2020 ಮಾರ್ಚ್‌

ಕೊಲೆ 16 9
ದರೋಡೆ 30 27
ಸರಗಳ್ಳತನ 24 5
ಮನೆಗಳ್ಳತನ 97 67
ವಾಹನ ಕಳವು 432 249
ಇತರೆ 303 192
ಅಪಹರಣ 78 69
ಒಟ್ಟು 902 618

ಈ ಬಗ್ಗೆ ಮಾತನಾಡಿದ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅವರು, ಕೊರೋನಾ ಸೋಂಕು ಆತಂಕದ ಹೊತ್ತಿನಲ್ಲಿ ಅಪರಾಧ ಪ್ರಕರಣಗಳು ಕಡಿಮೆ ಇಳಿಕೆ ಗಮನಾರ್ಹ ಬೆಳವಣಿಗೆಯಾಗಿದೆ. ಜನರು ಮನೆಯಲ್ಲೇ ಇರುವುದರಿಂದ ಕಳ್ಳತನಗಳಿಗೆ ಅವಕಾಶವಾಗುತ್ತಿಲ್ಲ. ಹೀಗಿದ್ದರೂ ಸಹ ಪೊಲೀಸರು ಮೈ ಮೆರೆಯದೆ ಅಪರಾಧ ಚಟುವಟಿಕೆಗಳ ಮೇಲೆ ನಿಗಾವಹಿಸಿದ್ದಾರೆ ಎಂದು ಹೇಳಿದ್ದಾರೆ. 
 

Follow Us:
Download App:
  • android
  • ios