ಕೊಪ್ಪಳ(ಮಾ.29): ಜಿಲ್ಲೆಗೆ ವಿದೇಶದಿಂದ ಆಗಮಿಸಿದ ಐವರು ಈಗಗಾಲೇ 22 ದಿನ ಪೂರೈಕೆ ಮಾಡಿದ್ದು, ಕೊರೋನಾ ಲಕ್ಷಣಗಳು ಕಂಡುಬಂದಿಲ್ಲ. ಆದರೂ ಇವರನ್ನು ಇನ್ನು ವಾರ ಕಾಲ ನಿಗಾ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿದೇಶದಿಂದ ಮಾರ್ಚ್‌ 3, 4ರಂದೇ ಆಗಮಿಸಿದ್ದಾರೆ. ಇವರ ಮೇಲೆ ನಿಗಾ ಇಡಲಾಗಿದ್ದು, ಇದುವರೆಗೂ ಅವರಿಗೆ ರೋಗದ ಯಾವುದೇ ಲಕ್ಷಣ ಕಂಡುಬಂದಿಲ್ಲ. ಈಗಾಗಲೇ 22 ದಿನ ಪೂರೈಕೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಮತ್ತೆ ಏರಿಕೆ:

ಕಳೆದೆರಡು ದಿನಗಳಿಂದ ಏರಿಕೆಯಾಗದ ನಿಗಾ ಇಟ್ಟವರ ಸಂಖ್ಯೆ ಶನಿವಾರ ಮತ್ತೆ ಏರಲು ಶುರು ಮಾಡಿದೆ. 68 ಇದ್ದಿದ್ದು 71 ಆಗಿದೆ. ಆದರೂ ಯಾರಲ್ಲಿಯೂ ರೋಗಲಕ್ಷಣಗಳು ಇಲ್ಲದೆ ಇರುವುದರಿಂದ ಸಮಸ್ಯೆಯಿಲ್ಲ. ಹೀಗಾಗಿ, ಇದುವರೆಗೂ ಕೇವಲ ಓರ್ವನ ದ್ರವವನ್ನು ಮಾತ್ರ ಪರೀಕ್ಷೆಗೆ ಕಳುಹಿಸಿದ್ದು ಹೊರತುಪಡಿಸಿದರೇ ಮತ್ತೆ ಕಳುಹಿಸಿಲ್ಲ. ಕಳುಹಿಸಿದ್ದ ವರದಿಯೂ ಈಗಗಾಲೇ ನೆಗಟಿವ್‌ ಎಂದು ಬಂದಿದೆ.

ಗುಳೆ ಹೋಗಿ ಸಿಲುಕಿಕೊಂಡ ಸಾವಿರಾರು ಕಾರ್ಮಿಕರು: ತುತ್ತು ಅನ್ನಕ್ಕಾಗಿ ಪರದಾಟ

ರೈಸ್‌ಮಿಲ್‌ಗೆ ಇಲ್ಲ ಅಡ್ಡಿ:

ಜಿಲ್ಲೆಯಲ್ಲಿ ಇರುವ ರೈಸ್‌ಮಿಲ್‌ ಎಂದಿನಂತೆ ನಡೆಯಲಿವೆ. ಅಲ್ಲದೆ ರೈತರು ಬತ್ತ ಮತ್ತು ರೈಸ್‌ ಸಾಗಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಜಿಲ್ಲಾಡಳಿತ ಪ್ರಕಟಣೆ ನೀಡಿದೆ. ಸರ್ಕಾರದ ಸುತ್ತೋಲೆಯ ಪ್ರಕಾರ ಅನುಮತಿ ನೀಡಲಾಗಿದೆ. ರೈಸ್‌ ಮಿಲ್‌ಗೆ ಬಂದು ಹೋಗುವ ಕಾರ್ಮಿಕರಿಗೆ ಅನುಮತಿ ನೀಡಲಾಗಿದೆ. ಆದರೆ, ಸ್ಯಾನಿಟೈಸರ್‌ ಮತ್ತು ಮಾಸ್ಕ್‌ಗಳನ್ನು ಕಡ್ಡಾಯವಾಗಿ ಮಿಲ್‌ ಮಾಲೀಕರು ಒದಗಿಸಬೇಕು ಎನ್ನುವ ಷರತ್ತು ವಿಧಿಸಲಾಗಿದೆ.

ಹಸಿವಿನಿಂದ ಅಲೆಯುತ್ತಿದ್ದ ಸಾವಿರಾರು ನಾಯಿಗಳಿಗೆ ಆಹಾರ, ನೀರು ಪೋರೈಕೆ

ಸ್ವಯಂ ನಿರ್ಬಂಧ:

ಕುಷ್ಟಗಿ ತಾಲೂಕಿನ ಬೋದೂರು ತಾಂಡಾ ಮತ್ತು ಯಲಬುರ್ತಿ ಗ್ರಾಮ ಸೇರಿದಂತೆ ನಾಲ್ಕಾರು ಗ್ರಾಮಗಳಲ್ಲಿ ಶನಿವಾರ ಮುಳ್ಳುಬೇಲಿ ಹಾಕಿಕೊಂಡು ಸ್ವಯಂ ನಿರ್ಬಂಧ ಹಾಕಿಕೊಳ್ಳಲಾಗಿದೆ. ತಮ್ಮೂರಿನಿಂದ ಬೇರೆಯವರ ಊರಿಗೆ ಮತ್ತು ಬೇರೆ ಊರಿನಿಂದ ತಮ್ಮೂರಿಗೆ ಬಾರದಂತೆ ಕಟ್ಟೆಚ್ಚರ ವಹಿಸಲಾಗಿದೆ.