ಮೈಸೂರು(ಮಾ.25): ಬಡವರ ಬಳಿ ಮೀಟರ್ ಬಡ್ಡಿ ವಸೂಲಿ ನಿಲ್ಲಿಸಿ. ಒಂದು ತಿಂಗಳ ಕಾಲ ನಿಲ್ಲಿಸುವಂತೆ ಮಾಡಿ ಎಂದು ಸಂಸದ ಪ್ರತಾಪ್‌ ಸಿಂಹ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಕರೋನ ಜಾಗೃತಿ ವಹಿಸುವಂತೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಅಪ್‌ಲೋಡ್ ಮಾಡಿ ಮನವಿ ಮಾಡಿದ್ದು, ನಮಗೆ ಹೆಚ್ಚು ತೊಂದರೆ ಕೊಡುವ ಮುನ್ನೂಚನೆಯನ್ನು ಕೊರೋನ ನೀಡುತ್ತಿದೆ. ದಯವಿಟ್ಟು ಯಾರೂ ಮನೆ ಬಿಟ್ಟು ಬರಬೇಡಿ ಎಂದು ವಿನಂತಿಸಿದ್ದಾರೆ.

ಕೊರೋನಾ ಹೆಚ್ಚಿದ ಭೀತಿ: ಭಯ ಬೇಡ, ಆತಂಕ ನಿವಾರಣೆಗೆ ಹೀಗ್ಮಾಡಿ

ಸಂಸತ್ ಅಧಿವೇಶನ ಅನಿರ್ಧಿಷ್ಟ ಅವಧಿಗೆ ಮುಂದೆ ಹೋಗಿದೆ. ತಕ್ಷಣ ಮೈಸೂರಿಗೆ ಬರುತ್ತಿದ್ದೇನೆ. ಬಂದ ಕೂಡಲೇ ಓಪನ್ ಜೀಪ್‌ನಲ್ಲಿ ಏರಿಯಾಗಳಲ್ಲಿ ತಿರುಗಿ ಪ್ರಚಾರ ಮಾಡುವೆ. ನೀವು ಹೊರ ಬಂದು ನೂರಾರು ಮಂದಿಗೆ ಹರಡುವಂತೆ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.

ಸೋಂಕು ತಡೆಗೆ 2 ತಿಂಗಳು ಸ್ವಯಂ ದಿಗ್ಬಂಧನ ಹಾಕಿದ ಗ್ರಾಮಸ್ಥರು