ಬೆಂಗಳೂರು(ಮಾ.25): ಕೊರೋನಾ ಭೀತಿ ದಿನೇ ದಿನೇ ಹೆಚ್ಚುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ವಹಿಸುತ್ತಿವೆ. ಹೀಗಿದ್ದರೂ ಸೋಂಕಿತರ ಸಂಖ್ಯೆ 500ರ ಗಡಿ ದಾಟಿದೆ. ಕರ್ನಾಟಕದಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ವಹಿಸುತ್ತಿದೆ. ಸದ್ಯ ರಾಜ್ಯ ಸೇರಿದಂತೆ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಹೀಗಿರುವಾಗ ಜನರು ಭಯ ಬೀಳಲಾರಂಭಿಸಿದ್ದಾರೆ. ಹೀಗಿರುವಾಗ ಜನರ ಭಯ, ಒತ್ತಡ, ಖಿನ್ನತೆ ನಿವಾರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಮನೋರೋಗ ತಜ್ಞರು ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರು ಕರೆ ಮಾಡಿ ಆಪ್ತ ಸಮಾಲೋಚನೆ ನಡೆಸಬಹುದಾಗಿದೆ.

ಬೆಳಗ್ಗೆ 7.00 ಗಂಟೆಯಿಂದ ಸಂಜೆ 7:30ರವರೆಗೆಸಾರ್ವಜನಿಕರು ವೈದ್ಯರಿಗೆ ಕರೆ ಮಾಡಿ ಒತ್ತಡ, ಖಿನ್ನತೆ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಮನೋರೋಗ ತಜ್ಞರ ವಿವರ ಈ ಕೆಳಗಿನಂತಿದೆ. 

-ಬೆಳಗ್ಗೆ 10am ರಿಂದ 11:30ರವರೆಗೆ: ಡಾ. ಆರ್. ಎಸ್. ದೀಪಕ್(ಚಿತ್ರದುರ್ಗ)- 8310437272

-ಬೆಳಗ್ಗೆ 11:30 ರಿಂದ ಮಧ್ಯಾಹ್ನ 1:00ವರೆಗೆ: ಡಾ. ಗೋಪಾಲ್ ದಾಸ್(ಚಿತ್ರದುರ್ಗ)-9008908206

-ಮಧ್ಯಾಹ್ನ 1:00 ರಿಂದ ಮಧ್ಯಾಹ್ನ 2:30ರವರೆಗೆ: ಡಾ. ಲೋಕೇಶ್ ಬಾಬು(ತುಮಕೂರು)- 9740707779

-ಮಧ್ಯಾಹ್ನ 2:30 ರಿಂದ 4:00ರವರೆಗೆ: ಡಾ. ಅಲೋಕ್ ಘನಟೆ(ಕಲಬುರಗಿ)-9241177535.

-ಸಂಜೆ 4 ರಿಂದ 5:30ರವರೆಗೆ: ಡಾ. ಸಂಜಯ್ ರಾಜ್(ತುಮಕೂರು)- 9886979089

-ಸಂಜೆ 5:30 ರಿಂದ 7:00 ರವರೆಗೆ: ಡಾ. ಮೃತ್ಯುಂಜಯ(ದಾವಣಗೆರೆ) - 9739238788

ಯಾವೆಲ್ಲಾ ಸಮಸ್ಯೆಗಳಿದ್ದರೆ ಸಂಪರ್ಕಿಸಬಹುದು?

ಆತಂಕ , ಭಯ, ಕೊರೋನಾ ವೈರಸ್ ಸಂಬಂಧಿತ ಅನುಮಾನ, ತೀವ್ರ ಒತ್ತಡ, ದುಃಖ, ಹತಾಶೆ, ಅಸಹಾಯಕತೆ, ನಿದ್ರಾ ಭಂಗ, ರೋಗ ಆತಂಕ ಮೊದಲಾದ ಮನಸ್ಸಿಗೆ ಸಂಬಂಧಿತ ಸಮಸ್ಯೆಗಳು.