Asianet Suvarna News Asianet Suvarna News

ಮಾಸ್ಕ್‌, ಸ್ಯಾನಿ​ಟೈ​ಸರ್‌ ವಿತರಣೆ: ದಯವಿಟ್ಟು ಮನೆಯಿಂದ ಹೊರಬರಬೇಡಿ ಎಂದ ಪಾಟೀಲ

ಜನರ ಜಾಗೃತಿಗೆ ಮುಂದಾದ ಶಾಸಕ ಎಚ್‌.ಕೆ. ಪಾಟೀಲ|ಕೊರೋನಾ ಆತಂಕ: ಮನೆ ಮನೆಗೆ ತೆರಳಿ ಮಾಸ್ಕ್‌ ವಿತರಿಸಿದ ಶಾಸಕ ಎಚ್‌.ಕೆ. ಪಾಟೀಲ| ಗದಗದಲ್ಲಿ ಲಾಕ್‌ಡೌನ್‌ ಜಾರಿಯಾದಾಗಿನಿಂದಲೂ ಜನಜಂಗುಳಿ ಸೇರಿ ಮತ್ತೆ ಆತಂಕ ಸೃಷ್ಟಿ| ಜಿಲ್ಲಾಡಳಿತ, ಪೊಲೀಸ್‌ ಅಧಿಕಾರಿಗಳು ಜನರಿಗೆ ಎಷ್ಟೇ ತಿಳಿವಳಿಕೆ ನೀಡಿದರೂ ಸರಿ ಹೋಗುತ್ತಿಲ್ಲ|  ಜನರಿಂದ ಬೇಜವಾಬ್ದಾರಿ ಪ್ರದರ್ಶನ|

MLA H K Patil Talks Over Coronavirus
Author
Bengaluru, First Published Mar 30, 2020, 12:00 PM IST

ಗದಗ(ಮಾ.30):  ಕೊರೋನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ಮೋದಿ ಇಡೀ ದೇಶವನ್ನೇ ಲಾಕ್‌ಡೌನ್‌ ಮಾಡಿದ್ದಾರೆ. ಅದಕ್ಕಾಗಿ ನೀವ್ಯಾರು ಮನೆಯಿಂದ ಬರಬೇಡಿ ಎಂದು ಗದಗ ಶಾಸಕ, ಮಾಜಿ ಸಚಿವ ಎಚ್‌.ಕೆ. ಪಾಟೀಲ ಮನವಿ ಮಾಡಿದ್ದಾರೆ. 

ಭಾನುವಾರ ಗದಗ ನಗರದ ನರಸಾಪುರ ಆಶ್ರಯ ಕಾಲೋನಿಯಲ್ಲಿರುವ ಸಾರ್ವಜನಿಕರಿಗೆ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ವಿತರಿಸಿ ಮಾತನಾಡಿದರು. ಗದಗದಲ್ಲಿ ಲಾಕ್‌ಡೌನ್‌ ಜಾರಿಯಾದಾಗಿನಿಂದಲೂ ಜನಜಂಗುಳಿ ಸೇರಿ ಮತ್ತೆ ಆತಂಕ ಸೃಷ್ಟಿಯಾಗುತ್ತಿದೆ. ಜಿಲ್ಲಾಡಳಿತ, ಪೊಲೀಸ್‌ ಅಧಿಕಾರಿಗಳು ಜನರಿಗೆ ಎಷ್ಟೇ ತಿಳಿವಳಿಕೆ ನೀಡಿದರೂ ಸರಿ ಹೋಗುತ್ತಿಲ್ಲ. ಜನರು ಮತ್ತೆ ಮತ್ತೆ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಒಂದೊತ್ತಿನ ಊಟಕ್ಕೂ ನಿರ್ಗತಿಕರ ಪರದಾಟ: ಇಂದಿರಾ ಕ್ಯಾಂಟೀನ್‌ನಲ್ಲಿ ಹೆಚ್ಚು ಹಣ ವಸೂಲಿ!

ಈ ಸಂದರ್ಭದಲ್ಲಿ ಮಾಜಿ ಶಾಸಕ ಡಿ.ಆರ್‌. ಪಾಟೀಲ್ ಮನೆ ಮನೆಗೆ ತೆರಳಿ ಮಾಸ್ಕ್‌ ವಿತರಿಸಿ, ಮನೆಯಿಂದ ಹೊರಗಡೆ ಬರಬೇಡಿ ಎಂದು ಮನವಿ ಮಾಡಿದರು. ಕೊರೋನಾದಿಂದ ಭಯಬೇಡ, ಆದರೆ ಹರಡದಂತೆ ಎಚ್ಚರಿಕೆಯಿಂದ ಇರಿ ಎಂದು ಸೂಚಿಸಿದ್ದಾರೆ.
 

Follow Us:
Download App:
  • android
  • ios