ಒಂದೊತ್ತಿನ ಊಟಕ್ಕೂ ನಿರ್ಗತಿಕರ ಪರದಾಟ: ಇಂದಿರಾ ಕ್ಯಾಂಟೀನ್‌ನಲ್ಲಿ ಹೆಚ್ಚು ಹಣ ವಸೂಲಿ!
ಇಂದಿರಾ ಕ್ಯಾಂಟೀನ್‌ನಲ್ಲಿ ಹೆಚ್ಚಿದ ಜನಜಂಗುಳಿ| ಹೆಚ್ಚುವರಿ ಹಣ ವಸೂಲಿ ಆರೋಪ| ಲಾಕ್‌ಡೌನ್‌ನಿಂದ ಕಾರ್ಮಿಕರಿಗೆ ಕೂಲಿ ಇಲ್ಲ| ಕೂಡಲೇ ಅಗತ್ಯ ಕ್ರಮಕ್ಕೆ ಕಾರ್ಮಿಕರ ಆಗ್ರಹ|
ಗದಗ(ಮಾ.30): ಇಡೀ ದೇಶವೇ ಲಾಕ್‌ಡೌನ್‌ದಿಂದ ತತ್ತರಿಸಿದೆ. ಕೂಲಿ ಕಾರ್ಮಿಕರಿಗೆ, ನಿರ್ಗತಿಕರು ಊಟಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಯದಲ್ಲಿ ಬಡವರ ಪಾಲಿಗೆ ಆಸರೆಯಾಗಿರುವುದು ಇಂದಿರಾ ಕ್ಯಾಂಟೀನ್. ಆದರೆ ಬೆಟಗೇರಿಯಲ್ಲಿನ ಇಂದಿರಾ ಕ್ಯಾಂಟೀನ್ ಮುಂದೆ ಜನಜಂಗುಳಿ ಹೆಚ್ಚುತ್ತಿದೆ.
ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿಲ್ಲ. ಕ್ಯಾಂಟಿನ್ ನಡೆಸುವ ಸಿಬ್ಬಂದಿ ಹೆಚ್ಚಿನ ಬೆಲೆಗೆ ಊಟ ತಿಂಡಿ ಕೊಡುತ್ತಿದ್ದಾರೆ. 5 ರೂಪಾಯಿ ಇದ್ದ ಉಪಹಾರಕ್ಕೆ 10 ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.
ಕೊರೋನಾ ಭೀತಿ: ಮುಸ್ಲಿಂ ಬಾಂಧವರಿಗೆ ದಾವಣಗೆರೆ ಡಿಸಿ ಮಹಾಂತೇಶ್ ಬೀಳಗಿ ಧನ್ಯವಾದ
ಲಾಕ್‌ಡೌನ್ ಹಿನ್ನೆಲೆ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚಿನ ದರ ಪಡೆಯುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಕೂಡಲೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.