ಬೆಂಗಳೂರು(ಏ. 05)    ಎಲ್ಲರೂ ದೀಪ ಹಚ್ಚಿ ದೇಶ  ಒಗ್ಗಟ್ಟಾಗಿದಿ ತೋರಿಸಿ  ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರೆ ನಮ್ಮ ಜನ ಮಾತು ಕೇಳಬೇಕಲ್ಲ.  ಅಂದು ಚಪ್ಪಾಳೆ ತಟ್ಟಿ ಎಂದಿದ್ದಕ್ಕೆ ರಸ್ತೆಗೆ ಬಂದಿದ್ದರು. ಇಂದು ದೀಪ ಹಚ್ಚಿ ಎಂದಿದ್ದಕ್ಕೆ ಪಟಾಕಿ ಹೊಡೆದಿದ್ದಾರೆ.

ಯಾರೂ ಎಷ್ಟೇ ಮನವಿ ಮಾಡಿಕೊಂಡಿದ್ದರೂ ಇವರು ಕೇಳುವ ಜಾಯಮಾನದವರಲ್ಲ. ಪುಂಡಾಟ ನಿಲ್ಲಿಸದೇ ಮನೆಯಿಂದ‌ ಹೊರಗೆ ಬಂದು ಪಟಾಕಿ ಸಿಡಿಸಿದ್ದಾರೆ.

ಪೊಲೀಸರ ಅದೊಂದೇ ಮಾತಿಗೆ ಬಗ್ಗಿ ಲಾಕ್ ಡೌನ್ ಮಾಡಿದ ಚಾಮರಾಜಪೇಟೆ

ಬೆಂಗಳೂರು ಕೆ.ಪಿ ಅಗ್ರಹಾರದ ಕೆಲ ಯುವಕರು ಪಟಾಕಿ ಸಿಡಿಸಿದ್ದಾರೆ. ದೇಶದಲ್ಲಿ ಅದೆಷ್ಟೋ ಜನರು ಕೊರೋನಾ ದೂರವಾಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದರೆ ಇವರು ಮಾತ್ರ ತಮ್ಮ ಪುಂಡಾಟಕ್ಕೆ ಬ್ರೇಕ್ ಹಾಕಿಕೊಂಡಿಲ್ಲ.

ಯುವಕರು ಪಟಾಕಿ ಸಿಡಿಸಿದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ಕೆಲವೇ ಕ್ಷಣದಲ್ಲಿ ವೈರಲ್ ಆಗಿದೆ. ಯಾರೂ ಏನೇ  ಹೇಳಿದರೂ, ಒಳಿತನ್ನೂ ಹೇಳಿದರೂ ಕೇಳಲ್ಲ ಎಂದು ಹೇಳುವವರಿಗೆ ಏನು  ತಾನೇ ಮಾಡಲು ಸಾಧ್ಯ?