ಮಂಡ್ಯ(ಮಾ.26): ಕೊರೋನಾ ಭೀತಿಯಿಂದ ಜಗತ್ತಿನ ಪ್ರಮುಖ ರಾಷ್ಟ್ರಗಳೇ ನಲುಗಿ ಹೋಗಿರುವಾಗ ಎಚ್ಚೆತ್ತುಕೊಂಡಿರುವ ಮಂಡ್ಯದ ಪುಟ್ಟ ಹಳ್ಳಿಯೊಂದು ತಮ್ಮೂರಿಗೆ ಯಾರೂ ಬರ್ಬೇಡಿ ಎಂದು ವಿನಂತಿಸಿ ಬೇಲಿ ಹಾಕಿಕೊಂಡಿದ್ದಾರೆ. ಬೆಂಗಳೂರು ಸೇರಿ ಹಲವು ಕಡೆ ಜನ ಮಾಂಸ ಖರೀದಿಗೆ ಮುಗಿಬಿದ್ದಿರುವಾಗಲೇ ಹಳ್ಳಿಯ ಜನ ಎಚ್ಚೆತ್ತುಕೊಂಡಿರುವುದು ಅನಕರಣೀಯ.

ಅತ್ತ ಬೆಂಗಳೂರು, ಮತ್ತಿತರ ಕಡೆ ಹಬ್ಬದ ಅಡುಗೆ ಮಾಂಸ ಕೊಳ್ಳಲು ತಂಡೋಪ ತಂಡೋಪವಾಗಿ ಜೊತೆಯಾದರೆ ಇತ್ತ ಹಳ್ಳಿಯವರು ಈ ರೋಗದ ಬಗ್ಗೆ ಎಚ್ಚೆತ್ತು ಕೊಳ್ಳುತ್ತಿದ್ದಾರೆ. ನಗರದಿಂದ ಬರುವವರಿಗೆ ಬಾಗಿಲು ಬಂದ್ ಮಾಡಿದ್ದಾರೆ. ನಮ್ಮನ್ನು ಸೇಫ್ ಆಗಿರಲು ಬಿಡಿ ಎಂದು ಆಗ್ರಹಿಸುತ್ತಿದ್ದಾರೆ.

ಜೀವಕ್ಕಿಂತ ಹೆಚ್ಚಾಯ್ತಾ ಮಾಂಸದ ಅಡುಗೆ..? ಮಟನ್ ಕೊಳ್ಳೋಕೆ ಮುಗಿಬಿದ್ದ ಜನ

ಗೃಹ ಬಂಧನದಲ್ಲಿರುವಾಗಲೇ ಸರಕಾರದ ಆದೇಶವನ್ನು ಕಠಿಣವಾಗಿ ಪಾಲಿಸಿದರೆ ರೋಗ ಹಬ್ಬುವುದನ್ನು ಬಹುಶಃ ತಡೆಯಬಹುದಿತ್ತು ಎಂದೆನಿಸುತ್ತೆ. ಆದರೆ ನಗರದಲ್ಲಿ ಜನ ಮಾತ್ರ ಸಣ್ಣ ಪುಟ್ಟ ನೆಪ ಹೇಳಿ ರಸ್ತೆಗೆ ಬರುತ್ತಿದ್ದಾರೆ. ಜನರ ಸುರಕ್ಷತೆಗೆ ಪೊಲೀಸರು ಬಲ ಪ್ರಯೋಗಿಸವಂತಹ ಪರಿಸ್ಥಿತಿ ಇದೆ. ಆದರೆ ಮಂಡ್ಯದ ಜನ ಇದಕ್ಕೆ ಹೊರತಾಗಿದ್ದಾರೆ.

ಹಳ್ಳಿ ಹಳ್ಲಿಯಲ್ಲೂ ಜಾಗೃತಿಗೊಳ್ಳುತ್ತಿರುವ ಜನ‌ ತಮ್ಮ ಗ್ರಾಮಕ್ಕೆ ಹೊರಗಿನವರ ಪ್ರವೇಶಕ್ಕೆ ನಿರ್ಬಂಧ ಹಾಕಿದ್ದಾರೆ. ಚೀರನಹಳ್ಳಿಗೆ ಪ್ರವೇಶ ನಿಷೇಧಿಸಿ ಮುಖ್ಯ ದ್ವಾರಕ್ಕೆ ಬೇಲಿ ಹಾಕಿದ್ಧಾರೆ. ಮಂಡ್ಯ ನಗರದ ಹೊರಹೊಲಯದಲ್ಲಿರುವ ಗ್ರಾಮಕ್ಕೆ ಹೊರಗಿನವರಿಗೆ ಪ್ರವೇಶ ನಿಷೇಧಿಸಲಾಗಿದೆ.

ಕಂಪ್ಲೀಟ್ ಲಾಕ್‌ಡೌನ್: ಅಗತ್ಯ ವಸ್ತು ಪೂರೈಕೆ ಸರ್ಕಾರಕ್ಕೆ ಸವಾಲು!

ಪಟ್ಟಣದಿಂದ ಹಲವಾರು ಜನರು ಗ್ರಾಮಕ್ಕೆ ಆಗಮಿಸುತ್ತಿದ್ದ ಹಿನ್ನಲೆ ಎಚ್ಚೆತ್ತ ಮುಖಂಡರು ಗ್ರಾಮದ ಮುಖ್ಯದ್ವಾರದ ರಸ್ತೆಗೆ ಅಡ್ಡಲಾಗಿ ಬೇಲಿ ನಿರ್ಮಾಣ ಮಾಡಿ ಮುಖ್ಯದ್ವಾರದ ಬಳಿ ನಿಂತು ಹೊರಗಿನವರನ್ನು ವಾಪಾಸ್ ಕಳುಹಿಸುತ್ತಿದ್ದಾರೆ.

ಪಟ್ಟಣದವರು ಪಟ್ಟಣದಲ್ಲೇ ಸುರಕ್ಷಿತವಾಗಿರಲಿ ನಾವು ಹಳ್ಳಿಯಲ್ಲಿ ಸುರಕ್ಷಿತವಾಗಿರುತ್ತೇವೆ. ಹಳ್ಳಿ ಜನರಿಗೆ ಸೋಂಕು ಹರಡಿಸಬೇಡಿ. ದಯಮಾಡಿ ನಮ್ಮ ಗ್ರಾಮಕ್ಕೆ ಬರಬೇಡಿ ಗ್ರಾಮಸ್ಥರು ಕೇಳಿಕೊಳ್ಳುತ್ತಿದ್ದಾರೆ.