ಮಂಡ್ಯ(ಏ.02): ಕೊರೋನಾ ವೈರಸ್‌ ಭೀತಿ ಹಿನ್ನೆಲೆ ಲಾಕ್‌ಡೌನ್‌ ಜಾರಿಯಿಂದ ಕಲ್ಲಂಗಡಿ ಬೆಳೆ ಬೆಳೆದಿದ್ದ ರೈತರೊಬ್ಬರು ಮಾರಾಟ ಮಾಡಲು ಸಾಧ್ಯವಾಗದೇ 8 ಎಕರೆಯಲ್ಲಿ ಬೆಳೆದಿದ್ದ ಸುಮಾರು 4 ಲಕ್ಷ ರು. ಮೌಲ್ಯದ ಬೆಳೆಯನ್ನು ಬುಧವಾರ ನಾಶ ಮಾಡಿದರು.

ಕಲ್ಲಂಗಡಿ ಸಂಪೂರ್ಣವಾಗಿ ಖರೀದಿ ಮಾಡುವವರೇ ಇಲ್ಲ. ಹೀಗಾಗಿ ಸುಮಾರು 4 ಲಕ್ಷ ರು. ಕಲ್ಲಂಗಡಿ ಕಿತ್ತು ಒಂದೆಡೆ ರಾಶಿ ಹಾಕಿ ಕೊಳೆತು ವಾಸನೆ ಬರಬಾರದೆಂದು ಔಷಧಿ ಸಿಂಪಡಿಸಿ ಗೊಬ್ಬರ ಮಾಡಲು ಮುಂದಾಗಿದ್ದಾರೆ ರೈತ ಶಂಕರಗೌಡರು.

ಕೊರೋನಾದಿಂದ ಪ್ರಾಣಿ, ಪಕ್ಷಿಗಳಿಗೆ ಪೂರಕ ವಾತಾವರಣ: ಮನೆ ಬಾಗಿ​ಲಿಗೆ ನವಿ​ಲು​ಗ​ಳ ಎಂಟ್ರಿ!

ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದ ಸಮೀಪದಲ್ಲಿರುವ ರೈತ ಸಂಘದ ಮುಖಂಡ ರೈತ ಶಂಕರಗೌಡ ತೋಟದಲ್ಲಿ 8 ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆ ಬೆಳೆದಿದ್ದರು. ಒಂದೂವರೆ ಲಕ್ಷ ಮಾಡಿ ಖರ್ಚು ಮಾಡಿ ಸುಮಾರು 5 ಸಾವಿರ ಕಲ್ಲಂಗಡಿ ಹಣ್ಣು ಬೆಳೆದಿದ್ದರು. ಖರೀದಿ ಮಾಡಲು ಯಾರೂ ಮುಂದೆ ಬರಲಿಲ್ಲ. ಜಮೀನಿನಲ್ಲಿ ಬೆಳೆದಿದ್ದ ಕಲ್ಲಂಗಡಿ ಹಣ್ಣನ್ನು ಕೂಲಿಕಾರರಿಗೆ ಹಣ ಕೊಟ್ಟು ಕೀಳಿಸಿ ಟ್ರ್ಯಾಕ್ಟರ್‌ ಮೂಲಕ ತಮ್ಮ ಜಮೀನಿನಲ್ಲಿ ಸುರಿದು ವಾಸನೆ ಬರದಂತೆ ಔಷಧಿ ಸಿಂಪಡಿಸಿದ್ದಾರೆ. ಜಮೀನಿನಲ್ಲೇ ಕಲ್ಲಂಗಡಿ ಬಿಟ್ಟರೆ ಹಣ್ಣು ಕೆಟ್ಟವಾಸನೆ ಬಂದು ಹುಳು ಹುಟ್ಟಿಕೊಳ್ಳುತ್ತದೆ. ಆದ್ದರಿಂದ ಕೀಳಿಸಿ ಒಂದೆಡೆ ಸುರಿದಿದ್ದಾರೆ. ಇದು ಇಂದಿನ ತೋಟಗಾರಿಕೆ ಬೆಳೆಯುವ ರೈತ ಗೋಳಾಗಿದೆ ಎನ್ನುತ್ತಾರೆ ರೈತ ಶಂಕರಗೌಡ .