ಗದಗ(ಮಾ.29): ಕೊರೋನಾ ವೈರಸ್‌ ತಡೆಗಟ್ಟಲು ದೇಶಾದ್ಯಂತ ಏಪ್ರಿಲ್ 14 ರ ವರೆಗೆ ಲಾಕ್‌ಡೌನ್‌ ಇದೆ. ಹೀಗಾಗಿ ಏಪ್ರಿಲ್‌ 5 ಮತ್ತು 6ರಂದು ಜರುಗಬೇಕಾಗಿದ್ದ ತಾಲೂಕಿನ ಲಕ್ಕುಂಡಿ ಗ್ರಾಮದ ಐತಿಹಾಸಿಕ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಜಾತ್ರೆಯನ್ನು ರದ್ದುಪಡಿಸಲಾಗಿದೆ. 

ಈ ಕುರಿತು ವೀರಭದ್ರೇಶ್ವರ ಜಾತ್ರಾ ಸಮಿತಿಯ ಸದಸ್ಯರಾದ ರಮೇಶ ಹಳ್ಳಿ ಹಾಗೂ ಈರಣ್ಣ ಬಂಕಾಪುರ ಪ್ರಕಟಣೆ ಹೊರಡಿಸಿದ್ದಾರೆ. 

'ಛತ್ತೀಸ್‌ಗಡದಲ್ಲಿ ಸಿಲುಕಿದ ರಾಜ್ಯದ ವಿದ್ಯಾರ್ಥಿಗಳು: ಮರಳಿ ಕರೆತರಲು ಸಿಎಂ ಜತೆ ಚರ್ಚೆ'

ಕೊರೋನಾ ವೈರಸ್‌ ತಡೆಗಟ್ಟಲು ಸರಕಾರದ ಮುಂಜಾಗ್ರತಾ ಕ್ರಮವನ್ನು ಪಾಲಿಸಲು ಜಿಲ್ಲಾಡಳಿತದ ಆದೇಶ ಮೇರೆಗೆ ಈ ವರ್ಷ ಏ. 5 ಮತ್ತು 6ರಂದು ಜರುಗಬೇಕಾಗಿದ್ದ ಜಾತ್ರಾ ಮಹೋತ್ಸವವನ್ನು ರದ್ದುಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.