ಉಚ್ಚಂಗಿದುರ್ಗ ಜಾತ್ರೆಗೆ ಬಂದು ಸಂಕಷ್ಟಕ್ಕೆ ಸಿಲುಕಿದ ಬಡ ವ್ಯಾಪಾರಿಗಳು!
ವ್ಯಾಪಾರಕ್ಕೆಂದು ಸಂಕಷ್ಟಕ್ಕೆ ಸಿಲುಕಿದ ವ್ಯಾಪಾರಿಗಳು| ಕೊಪ್ಪಳ ಜಿಲ್ಲೆಯ ವ್ಯಾಪಾರಿಗಳು| ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಪ್ರಸಿದ್ಧ ಉಚ್ಚಂಗಿದುರ್ಗ ಉತ್ಸವಾಂಬಾ ದೇವಸ್ಥಾನಕ್ಕೆ ಆಗಮಿಸಿದ ಕೊಪ್ಪಳ ಮೂಲದ 30 ಬಡ ವ್ಯಾಪಾರಿಗಳು|
ಹರಪನಹಳ್ಳಿ(ಏ.05): ಯುಗಾದಿ ಜಾತ್ರೆಗೆಂದು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಪ್ರಸಿದ್ಧ ಉಚ್ಚಂಗಿದುರ್ಗ ಉತ್ಸವಾಂಬಾ ದೇವಸ್ಥಾನಕ್ಕೆ ಆಗಮಿಸಿದ ಕೊಪ್ಪಳ ಮೂಲದ 30 ಬಡ ವ್ಯಾಪಾರಿಗಳು ಊಟ, ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ಇವರ ನೆರವಿಗೆ ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಧಾವಿಸಿದ್ದಾರೆ.
ಯುಗಾದಿ ಹಬ್ಬದಲ್ಲಿ ಉಚ್ಚಂಗಿ ದುರ್ಗದಲ್ಲಿ ವೈಭವದ ಜಾತ್ರೆ ನಡೆಯುತ್ತದೆ. ಲಕ್ಷಾಂತರ ಭಕ್ತರು ಸೇರುತ್ತಾರೆ. ಆದರೆ, ಈ ಬಾರಿ ಜಾತ್ರೆ ರದ್ದಾಗಿರುವ ವಿಚಾರ ತಿಳಿಯದೆ ಆಟಿಕೆ ಸಾಮಾನು ಮಾರಲು ಅಗಮಿಸಿದ್ದರು.
ಕೊರೋನಾ ಮಧ್ಯೆಯೂ ಸಾಮೂಹಿಕ ನಮಾಜ್: ಐವರ ಬಂಧನ
ಕೊಪ್ಪಳ ಮೂಲದ 30 ಮಂದಿ ಲಾಕ್ ಡೌನ್‌ನಿಂದಾಗಿ ವಾಪಸ್ ಹೋಗಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಊಟಕ್ಕಾಗಿ ಪರದಾಡುವ ಸ್ಥಿತಿ ಇವರದಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಅವರು ತಾಲೂಕು ಆಡಳಿತದ ಗಮನಕ್ಕೆ ತಂದು ಬಿಸಿಎಂ ಇಲಾಖೆ ಅಧಿಕಾರಿ ಭೀಮನಾಯ್ಕ ಅವರ ತಂಡವನ್ನು ಕರೆಸಿ ಬಡ ವ್ಯಾಪಾರಿಗಳಿಗೆ ದಿನ ಬಳಕೆ ವಸ್ತು, ಆಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ.