Asianet Suvarna News Asianet Suvarna News

ಕೊರೋನಾ ಮಧ್ಯೆಯೂ ಸಾಮೂಹಿಕ ನಮಾಜ್‌: ಐವರ ಬಂಧನ

ನಿಷೇಧಾಜ್ಞೆ ಮಧ್ಯೆಯೂ ಸಾಮೂಹಿಕ ನಮಾಜ್‌| ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ನಡೆದ ಘಟನೆ| ನಮಾಜ್‌ ಮಾಡುತ್ತಿದ್ದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು| 

Mass Namaj held at Masjid in Karatagi in Koppal District
Author
Bengaluru, First Published Apr 5, 2020, 8:31 AM IST

ಕಾರಟಗಿ(ಏ.05): ಕೊರೋನಾ ವೈರಸ್‌ ತಡೆಗಟ್ಟುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುವುದರ ಜತೆಗೆ ಸಾಮೂಹಿಕ ನಮಾಜ್‌ ರದ್ದು ಆದೇಶ ಉಲ್ಲಂಘಿಸಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಸಾಮೂಹಿಕ ನಮಾಜ್‌ ಮಾಡುತ್ತಿದ್ದವರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶುಕ್ರವಾರ ರಾತ್ರಿ ಈ ಘಟನೆ ಜರುಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಟಗಿ ಪೊಲೀಸರು ಒಟ್ಟು 5 ಜನರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಸೋಮನಾಳ ಗ್ರಾಮದ ಹೊರ ಹೊಲಯದ ಜುಮ್ಮಾ ಮಸಜೀದ್‌ನ ಶೆಡ್‌ನಲ್ಲಿ ಸಾಮೂಹಿಕ ನಮಾಜು ಮಾಡುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಪತ್ತೆ ಹಚ್ಚಿ ವಿಡಿಯೋ ಮಾಡಿಕೊಂಡು ಅವರನ್ನು ಕೂಡಿಹಾಕಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್‌ ಸುರೇಶ ತಳವಾರ ಸ್ಥಳಕ್ಕೆ ತೆರಳುತ್ತಿದ್ದಂತೆ ಐವರಲ್ಲಿ ಮೂವರು ಪರಾರಿಯಾಗಿದ್ದರು.

ಊಟ ಸಿಗದೆ ಚಾಲಕ, ಕ್ಲೀನರ್‌ಗಳ ಪರದಾಟ: SP ಕಟಿಯಾರ್‌ರಿಂದ ಅನ್ನದಾನ!

ಕಾರಟಗಿ ಪಿಎಸ್‌ಐ ಅವಿನಾಶ ಕಾಂಬಳೆ ಶನಿವಾರ ಇನ್ನುಳಿದ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕನಕಗಿರಿಯ ವಜೀರಸಾಬ ಕಿನ್ನಾಳ ಮತ್ತು ರಾಜಾಸಾಬ ಗಲೆಗಾರ ಹಾಗೂ ಸೋಮನಾಳ ಗ್ರಾಮದ ಯುನೂಸ್‌, ಹಸನಸಾಬ್‌ ಹಾಗೂ ದಾದಾಪೀರ ಆದೇಶ ಉಲ್ಲಂಘಿಸಿ ನಮಾಜ್‌ ಮಾಡಿ ಬಂಧನಕ್ಕೊಳಗಾದವರು. ಕಾರಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios