ಬೆಂಗಳೂರು, (ಮಾ.26): ಕೊರೋನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಮಾರ್ಚ್ 27ರಿಂದ ಆರಂಭವಾಗಬೇಕಿದ್ದ ಎಸ್‌ಎಸ್‌ಎಲ್‌ ಪರೀಕ್ಷೆಗಳು ಹಾಗೂ ಬಾಕಿ ಇರುವ ಒಂದು ವಿಷಯದ PUC ಪರೀಕ್ಷೆಯನ್ನು ಮುಂದೂಡಲಾಗಿದೆ. ಇನ್ನು ಹೊಸ ದಿನಾಂಕವನ್ನು ಘೋಷಣೆ ಮಾಡಿಲ್ಲ.

ಈ ಬಗ್ಗೆ ಇಂದು (ಗುರುವಾರ) ಮಾಹಿತಿ ನೀಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಏಪ್ರಿಲ್ 20ರ ನಂತರ ಪರೀಕ್ಷೆ ದಿನಾಂಕವನ್ನು ಘೋಷಿಸಲಾಗುವುದು ಎಂದು ತಿಳಿಸಿದೆ.

ವ್ಯಾಪಿಸುತ್ತಲೇ ಇದೆ ಕೊರೋನಾ, ಮತ್ತೆ ನಾಲ್ವರಿಗೆ ಸೋಂಕು: ಒಟ್ಟು 55ಕ್ಕೇರಿಕೆ

7ರಿಂದ 9ನೇ ತರಗತಿ ಪರೀಕ್ಷೆಳನ್ನು, SSLC ಎಕ್ಸಾಂ, RTE ಅಡಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಹಾಗೂ 2020-21 ಸಾಲಿಗೆ ದಾಖಲಾತಿ ಪ್ರಕ್ರಿಯೆಗಳನ್ನೂ ಏಪ್ರಿಲ್ 20ರ ವರೆಗೂ ಮುಂದೂಡಲಾಗಿದೆ.

ಕೊರೋನಾ ವೈರಸ್ ತಡೆಗೆ ಸಾಮಾಜಿಕ ಡಿಸ್ಟೆನ್ಸ್ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14ರ ವರೆಗೆ ಇಡೀ ದೇಶವನ್ನ ಲಾಕ್‌ಡೌನ್ ಮಾಡಿ ಆದೇಶಿಸಿದ್ದಾರೆ. ಇದರಿಂದ ಏಪ್ರಿಲ್ 14ರ ವರೆಗೆ ಯಾವ ಪರೀಕ್ಷೆಗಳು ಇರುವುದಿಲ್ಲ. ಇದರಿಂದ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಈ ತೀರ್ಮಾನಿಸಿದೆ.