ಬೆಂಗಳೂರು, (ಮಾ.26): ನಿನ್ನೆ (ಬುಧವಾರ) ಒಂದೇ ದಿನದಲ್ಲಿ ಕರ್ನಾಟಕದಲ್ಲಿ 10 ಕೊರೋನಾ ಕೇಸ್‌ಗಳು ಪತ್ತೆಯಾಗಿದ್ದವು. ಆದ್ರೆ, ಇಂದು (ಗುರುವಾರ) ಮತ್ತೆ 4 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿದೆ.

"

ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.  ಮೈಸೂರು ಮೂಲದ 5 ವರ್ಷದ ವ್ಯಕ್ತಿ. ಮೆಕ್ಕಾದಿಂದ ವಾಪಸ್‌ ಆಗಿದ್ದ ಚಿಕ್ಕಬಳ್ಳಾಪುರದ 75 ವರ್ಷದ ವೃದ್ಧ, ಬೆಂಗಳೂರಿನ 45 ವರ್ಷದ ಹಾಗೂ ಫ್ರಾನ್ಸ್‌ನಿಂದ ಬೆಂಗಳೂರಿಗೆ ಮರಳಿದ್ದ 64 ವಯಸ್ಸಿನ ವೃದ್ಧನಿಗೆ ಕೊರೋನಾ ತಗುಲಿರುವುದು ದೃಢಪಟ್ಟಿದೆ.

ಕೊರೋನಾ ಪರಿಹಾರ: 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಕೇಂದ್ರ!

ಅದರಲ್ಲೂ  ಮೈಸೂರಿನ ಮೂಲದ 35 ವರ್ಷದ ವ್ಯಕ್ತಿ ಕೊರೋನಾ ಕಾಣಿಸಿಕೊಂಡಿರುವುದು ಬಾರಿ ಆಘಾತವನ್ನುಂಟು ಮಾಡಿದೆ. ಯಾಕಂದ್ರೆ ಈ ವ್ಯಕ್ತಿ ವಿದೇಶಕ್ಕೂ ಹೋಗಿರಲಿಲ್ಲ. ಮತ್ತು ಸೋಂಕಿತರ ಒಡನಾಟವೂ ಇರಲಿಲ್ಲ. ಆದರೂ ಕೊರೋನಾ ಪಾಸಿಟಿವ್ ಇರುವುದು ಆರೋಗ್ಯ ಇಲಾಖೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ಇದನ್ನು ನೋಡುತ್ತಿದ್ರೆ ಕರ್ನಾಟಕದಲ್ಲಿ ಕೊರೋನಾ ವೈರಸ್ ಮೂರನೇ ಹಂತಕ್ಕೆ ಕಾಲಿಡುತಿದ್ಯಾ..? ಎನ್ನುವ ಅನುಮಾನಗಳು ಶುರುವಾಗಿದ್ದಲ್ಲದೇ ಭಯ ಹುಟ್ಟಿಸುತ್ತಿದೆ. ಆದ್ದರಿಂದ ಸಾರ್ವಜನಿಕರು ಎಚ್ಚೆತ್ತುಕೊಂಡು ಸರ್ಕಾರ ಹೊರಡಸುವ ಆದೇಶಗಳನ್ನ ದಯವಿಟ್ಟು ಪಾಲಿಸಿ ಕಿಲ್ಲರ್ ವೈರಸ್‌ನ್ನು ತಡೆಗಟ್ಟಲು ಸಹಕರಿಸಬೇಕೆಂದು ವಿನಂತಿ.