ಬೆಂಗಳುರು, (ಮಾ.31): ಅನೇಕ ಮಳಿಗೆಗಳು , ಅಂಗಡಿಗಳು ಮತ್ತು ಸಂಸ್ಥೆಗಳು ಮಾಸ್ಕ್ ಧರಿಸುವಂತೆ ಜನರಿಗೆ ಒತ್ತಾಯಿಸುತ್ತಿದೆ ಎನ್ನುವುದು ಗಮನಿಸಿದ ರಾಜ್ಯ ಸರ್ಕಾರ ಮಂಗಳವಾರ ಈ ಸಂಬಂಧ ಸ್ಪಷ್ಟನೆ ನೀಡಿದೆ. ಅದರಂತೆ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕಾಗಿಲ್ಲ ಎಂದು ತಿಳಿಸದೆ.

ಸಿಕ್ಕ-ಸಿಕ್ಕವರೆಲ್ಲ ಮಾಸ್ಕ್ ಹಾಕಿಕೊಂಡು ಕೆಲವರು ಪೋಟೋಗೆ ಫೋಸ್ ಕೊಟ್ರೆ ಇನ್ನು ಕೆಲವರು ಟಿಕ್‌ ಟಾಕ್ ಮಾಡುತ್ತಿದ್ದಾರೆ. ಇದರಿಂದ ಮಾಸ್ಕ್ ಮಾರಾಟದಲ್ಲಿ ಭಾರೀ ಏರಿಕೆಯಾಗಿದೆ. ಇನ್ನು ಇದೇ ಬಮಡವಾಳ ಮಾಡಿಕೊಂಡ ಕೆಲವರು ನಕಲಿ ಮಾಸ್ಕ್‌ಗಳನ್ನು ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಹಣ ಮಾಡಿಕೊಳ್ಳುತ್ತಿದ್ದಾರೆ.

ನೀವು ಹಾಕಿದ ಮಾಸ್ಕ್ ಅಸಲಿಯೇ? ಬೆಂಗಳೂರಿಗರಿಗೆ ಮತ್ತೊಂದು ಶಾಕ್!

ಮುಖ್ಯವಾಗಿ ಎಲ್ಲರೂ N-95 ಮಾಸ್ಕ್‌ಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ವೈದ್ಯರಿಗೆ ಸೇರಿದಂತೆ ತುರ್ತು ಸೇವೆಗಳ ಸಿಬ್ಬಂದಿಗೆ ಮಾಸ್ಕ್ ಕೊರೆತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಎಲ್ಲರೂ ಮಾಸ್ಕ್ ಹಾಕಿಕೊಳ್ಳುವುದು ಅವಶ್ಯಕತೆ ಇಲ್ಲ ಎಂದು ಸ್ಪಷ್ಟನೆ ಕೊಟ್ಟಿದೆ.

ಹಾಗಾದರೆ ಯಾರ್ಯಾರು ಮಾಸ್ಕ್ ಧರಿಸಬೇಕು?

* ಒಬ್ಬ ವ್ಯಕ್ತಿಯು ಶೀತ ಅಥವಾ ಕೆಮ್ಮು ಅಥವಾ ಜ್ವರ ಅಥವಾ ಇನ್ನಾವುದೇ ಉಸಿರಾಟದ ತೊಂದರೆಯ ಲಕ್ಷಣದಿಂದ ಕೂಡಿದ್ದಲ್ಲಿ ಮಾತ್ರವೇ ಮಾಸ್ಕ್ ಧರಿಸಬೇಕು ಎಂದು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಹೇಳೀದ್ದಾರೆ.

* ಕೋವಿಡ್-19 ಶಂಕಿತ ಅಥವಾ ದೃಢವಾಗಿರುವ ರೋಗಿಯನ್ನು ನೋಡಿಕೊಳ್ಳುವ ವ್ಯಕ್ತಿಯು ಮಾಸ್ಕ್ ಧರಿಸಬೇಕು 

* ಉಸಿರಾಟದ ತೊಂದರೆಯ ಲಕ್ಷಣಗಳಿರುವ ರೋಗಿಯ ಪರೀಕ್ಷಿಸಲು ಹಾಜರಾಗುವ  ಆರೋಗ್ಯ ಕಾರ್ಯಕರ್ತ ಮಾಸ್ಕ್ ಧರಿಸಬೇಕಿದೆ. 

* ಕೊರೋನಾ ಶಂಕಿತರು  ಅಥವಾ ರೋಗಿಗಳಿಗೆ ಚಿಕಿತ್ಸೆ ನೀಡುವ ಅಥವಾ ಅವರ ಮೇಲ್ವಿಚಾರಣೆ ನಡೆಸುವ ವ್ಯಕ್ತಿಗಳು ಎನ್95 ಮಾಸ್ಕ್ ಧರಿಸಬೇಕಾಗುತ್ತದೆ. ಉಳಿದವರು  ಟ್ರಿಪಲ್ ಲೇಯರ್ ಸರ್ಜಿಕಲ್ ಮಾಸ್ಕ್ ಧರಿಸಬಹುದು ಎಂದು ಸರ್ಕಾರ ಹೇಳಿದೆ.