ಬೆಂಗಳೂರು(ಮಾ. 31)  ಕೋಟಿ ಕೋಟಿ ರೂಪಾಯಿಗೆ ನಕಲಿ ಮಾಸ್ಕ್ ಮಾರಾಟ ಮಾಡಲಾಗಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಬೆಂಗಳುರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಬಿಚ್ಚಿಟ್ಟಿದ್ದಾರೆ

ಕೇವಲ 18 ರೂ.ಗೆ ಒಂದು ನಕಲಿ ಮಾಸ್ಕ್ ತರಾರಾಗುತ್ತಿತ್ತು. ಕೋಟಿ ಕೋಟಿ ಹಣಕ್ಕೆ ನಕಲಿ ಮಾಸ್ಕ್ ಮಾರಾಟಮಾಡಲಾಗಿದೆ. ಜರ್ಮನ್ ಟ್ರೇಡ್ ಮಾರ್ಕ್ ಮಾದರಿಯ ಚಿಹ್ನೆ ಬಳಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬನಿಯನ್ ಗೆ ಬಳಸುವ ಬಟ್ಟೆಯಿಂದ ನಕಲಿ N-95 ಮಾಸ್ಕ್ ತಯಾರಿಕೆ ಮಾಡಲಾಗುತ್ತಿತ್ತು. ಕೆಲ ಮೆಡಿಕಲ್ ಶಾಪ್‌ಗಳಿಗೂ ಇದನ್ನು ಮಾರಾಟ ಮಾಡಿರುವ ಶಂಕೆ‌ಇದೆ.  ಹೀಗಾಗಿ ತನಿಖೆ‌ ಚುರುಕುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಕ್ಯಾಶಿಯರ್ ಅಸ್ಗರ್ ಎಂಬಾತನನ್ನು ಬಂಧಿಸಲಾಗಿದ್ದು ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಅಮೀರ್ ಅರ್ಷದ್ ಸುರುಷ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.