ಬೆಂಗಳೂರು(ಏ. 09)  ಕೊರೋನಾ ವಿರುದ್ಧ ಹೋರಾಟ ಜಾರಿಯಲ್ಲಿದ್ದು ಬೆಂಗಳೂರಿನಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲು ಮುಂದಾದ ಅಬಕಾರಿ ಇಲಾಖೆ ಕಠಿಣ ಕ್ರಮ ತೆಗೆದುಕೊಂಡಿದೆ.  ಅಬಕಾರಿ ಜಂಟಿ ಆಯುಕ್ತ ನಾಗೇಶ್ ನೇತೃತ್ವದಲ್ಲಿ ಪಥಸಂಚಲನ ನಡೆಸಲಾಗಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ಮೂಲಕ ಜಾಗೃತಿ ಮೂಡಿಸಲಾಗಿದೆ.  ಅಕ್ರಮ ಮದ್ಯ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.  ಫಥಸಂಚಲನ ಮೂಲಕ  ಅಬಕಾರಿ ಇಲಾಖೆ ಮದ್ಯ ಮಾರಾಟಕ್ಕೆ ಮುಂದಾದರೆ ಯಾವೆಲ್ಲ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದೆ.

ಲಾಕ್ ಡೌನ್ ಮಧ್ಯೆಯೂ ಮದ್ಯ ಲಭ್ಯ, ಇದೆಂಥಾ ಐಡಿಯಾ ಗುರು

ಮೂರು ದಿನಗಳ ಕಾಲ ನಗರದ ಪ್ರಮುಖ ರಸ್ತೆಗಳಲ್ಲಿ ಅಬಕಾರಿ ಇಲಾಖೆ ಪಥಸಂಚಲನ ಮಾಡಿದೆ.  ಅಕ್ರಮವಾಗಿ ಮದ್ಯ ಮಾರಾಟ,ಸಾಗಾಣಿಕೆ ಮಾಡುತ್ತಿದ್ದ ಸಂಬಂಧ ಇದುವರೆಗೆ 22 ಪ್ರಕರಣ ದಾಖಲಾಗಿದೆ.  ಪ್ರಕರಣ ಸಂಬಂಧ 14 ಜನ ಆರೋಪಿಗಳನ್ನ ಬಂಧಸಿದ್ದು,  2 ವಾಹನ 2085 ಲೀ.ಮದ್ಯ, 1653 ಲೀ ಬಿಯರ್‌, 40 ಲೀ. ಸೇಂದಿ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ. ನಿಯಮ ಉಲ್ಲಂಘಿಸಿ ಅಕ್ರಮ ಮದ್ಯ ಮಾರಾಟ ಹಿನ್ನಲೆ 6 ಅಬಕಾರಿ ಸನ್ನದುಗಳು ರದ್ದುಮಾಡಲಾಗಿದೆ. 

ಮದ್ಯ ಸಿಗದೇ ರಾಜ್ಯದಲ್ಲಿ ಅದರಲ್ಲೂ ಕರಾವಳಿ ಭಾಗದಲ್ಲಿ ಅನೇಕರು ಆತ್ಮಹತ್ಯೆಗೆ ಶರಣಾಗಿದ್ದರು. ಸಿಎಂ ಬಳಿ ಸಹ ನಿರ್ದಿಷ್ಟ ಅವಧಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲು ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಲಾಕ್ ಡೌನ್ ಅವಧಿ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ಎಣ್ಣೆ ಇಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ.