ಕೊಪ್ಪಳ(ಏ.01): ದೇಶದಾದ್ಯಂತ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ಜನರು ಗುಂಪಾಗಿ ಇರಬಾರದು ಎಂದು ಪೊಲೀಸರೇ ತಿಳಿ ಹೇಳುತ್ತಿದ್ದಾರೆ. ಆದರೆ, ತಾಲೂಕಿನ ಮುನಿರಾಬಾದ್‌ ಬಳಿ ಇರುವ ಭಾರತೀಯ ಸಶಸ್ತ್ರ ಮೀಸಲು ಪಡೆಯ ತರಬೇತಿ ಕೇಂದ್ರದಲ್ಲಿ ಮಾತ್ರ ತರಬೇತಿಯಲ್ಲಿರುವ ಪೇದೆಗಳಿಂದ ಗುಂಪುಗುಂಪಾಗಿ ಕೆಲಸ ಮಾಡಿಸಲಾಗುತ್ತದೆ.

ಹೀಗೆ ಕೆಲಸ ಮಾಡುವ ವೀಡಿಯೋವನ್ನು ಅಲ್ಲಿಯ ಪೇದೆಗಳು ರೆಕಾರ್ಡ್‌ ಮಾಡಿ ನೀಡಿದ್ದಾರೆ. ಮೇಲಾಧಿಕಾರಿಗಳ ಉದ್ಧಟತನದಿಂದ ನಮಗೆ ವಿಪರೀತ ಹಿಂಸೆಯಾಗುತ್ತಿದೆ. ಕೊರೋನಾ ಇದ್ದರೂ ಗುಂಪುಗುಂಪಾಗಿ ಕೆಲಸ ಮಾಡಿಸಲಾಗುತ್ತದೆ. ಇದರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕೊರೋನಾ ಪರಿಹಾರ ನಿಧಿಗೆ ಸಂಸದ ಸಂಗಣ್ಣ ಕರಡಿಯಿಂದ 1 ಕೋಟಿ ದೇಣಿಗೆ

ತರಬೇತಿಯ ನೆಪದಲ್ಲಿ ಮೀಸಲುಪಡೆಯ ಅಂಗಳದಲ್ಲಿ ವಿವಿಧ ಕೆಲಸ ಮಾಡಿಸುತ್ತಿದ್ದಾರೆ. ಇದರಲ್ಲಿ ಕೆಲವರು ನಾನಾ ಕಾರಣಕ್ಕಾಗಿ ಹೊರಗೆ ಹೋಗಿ ಬಂದವರು ಇದ್ದಾರೆ. ಇಷ್ಟಾದರೂ ಸಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವ ಯಾವ ನಿಯಮವೂ ಇಲ್ಲ ಪಾಲನೆಯಾಗುತ್ತಿಲ್ಲ.