ಕೊಪ್ಪಳ(ಏ.01): ಕೊರೋನಾ ವಿಪತ್ತು ಪರಿಹಾರ ನಿಧಿಗೆ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದರ ನಿಧಿಯಿಂದ 1 ಕೋಟಿ ರುಪಾಯಿಯನ್ನು ನೀಡಿದ್ದಾರೆ. ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಅವರಿಗೆ ಪತ್ರ ನೀಡುವ ಮೂಲಕ ಸಂಸದರು ತಮ್ಮ ಸಂಸದರ ನಿಧಿಯನ್ನು ನೀಡಿದ್ದಾರೆ.

ಕೊರೋನಾ ವಿಪತ್ತು ನಿಗ್ರಹದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವುದು ಆದ್ಯ ಕರ್ತವ್ಯವಾಗಿದೆ. ಪ್ರಧಾನಿಗಳ ಕೋರಿಕೆಯಂತೆ ಸಂಸದರ ನಿಧಿಯನ್ನು ಕೊರೋನಾ ನಿಗ್ರಹಕ್ಕೆ ಬಳಕೆ ಮಾಡಿಕೊಳ್ಳಲು 1 ಕೋಟಿ ರುಪಾಯಿ ನೀಡಲಾಗಿದೆ ಎಂದರು.

ಕೊರೋನಾ ಮಣಿಸಲು ಪಿಎಂ ಕೇರ್ಸ್ ನಿಧಿಗೆ 500 ಕೋಟಿ ದೇಣಿಗೆ ನೀಡಿದ ರಿಲಯನ್ಸ್ ಇಂಡಸ್ಟ್ರೀಸ್‌

ಪ್ರತಿಯೊಬ್ಬರೂ ಜಾಗೃತರಾಗಬೇಕಾಗಿದೆ. ಮನೆಯಲ್ಲಿಯೇ ಇರುವ ಮೂಲ ಕೊರೋನಾ ಹೊಡೆದೊಡಿಸಬೇಕಾಗಿದೆ ಎಂದು ತಿಳಿಸಿದ್ದಾರೆ.