ಮೈಸೂರು(ಎ.02): ಕೊರೋನಾ ವೈರಸ್‌ ನಿವಾರಣೆ ಸಂಬಂಧ ನಗರದ ದೇವಾಲಯವೊಂದರಲ್ಲಿ ನಡೆಯುತ್ತಿದ್ದ ಹೋಮದ ವೇಳೆ ಜೇನು ದಾಳಿ ನಡೆಸಿದೆ. ಅಗ್ರಹಾರದ ಕಾಶಿ ವಿಶ್ವನಾಥ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಶಾಸಕ ಎಸ್‌.ಎ. ರಾಮದಾಸ್‌ ಅವರು ಈ ಹೋಮದಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಹೋಮ ಆರಂಭಕ್ಕೂ ಮುನ್ನ ಜೇನು ದಾಳಿ ನಡೆಸಿದೆ. ಜೇನು ದಾಳಿ ನಡೆಸಿದ್ದನ್ನು ನೋಡಿದ ಆಯೋಜಕರು ಮತ್ತು ಅರ್ಚಕರು ಪೂಜಾ ಸಾಮಗ್ರಿಯನ್ನು ಬಿಟ್ಟು ಓಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಜೇನು ಕಡಿಮೆಯಾಗುತ್ತಿದ್ದಂತೆಯೇ ಪೂಜೆ ಮುಂದುವರೆಸಿದರು.

ವೈದ್ಯಕೀಯ ಸಿಬ್ಬಂದಿ ಸಾವಿಗೀಡಾದರೆ 1 ಕೋಟಿ ಪರಿಹಾರ!

ಈಗಾಗಲೇ ಮೈಸೂರು ಭಾಗದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ದೆಹಲಿ ಮಸೀದಿಗೆ ಹೋಗಿ ಬಂದವರ ಸಂಖ್ಯೆಯೂ ಹೆಚ್ಚಿದ್ದು ಕೊರೋನಾ ವೈರಸ್ ಇನ್ನಷ್ಟು ವ್ಯಾಪಿಸುವ ಭೀತಿ ಉಂಟಾಗಿದೆ.