Asianet Suvarna News Asianet Suvarna News

ಕೊರೋನಾ ಭೀತಿ: ಡಾಕ್ಟರ್‌ಗಳಿಗೆ ಜಾಗವಿಲ್ಲ, ಮನೆ ಓನರ್‌ಗಳ ಕಿರಿಕ್!

ನಮ್ಮನ್ನು ಕಾಪಾಡಲು ತಮ್ಮ ಜೀವದ ಹಂಗು ತೊರೆದು ಯೋಧರಂತೆ ಹೋರಾಡುತ್ತಿರುವ ವೈದ್ಯ ಹಾಗೂ ಅರೆ ಸಿಬ್ಬಂದಿ| ಮನೆ ಖಾಲಿ ಮಾಡಲು ಹೇಳುವುದು ಇದೆಂಥಾ ನ್ಯಾಯ?| ಮನೆ ಮಾಲೀಕರ ವಿರುದ್ಧ ಕ್ರಮಕ್ಕೆ ಮುಂದಾದ ಆರೋಗ್ಯ ಇಲಾಖೆ| 

Helath Department Intstruct to DC for Take Action Against House Owners
Author
Bengaluru, First Published Mar 26, 2020, 12:04 PM IST

ಬೆಂಗಳೂರು(ಮಾ.26): ಮಹಾಮಾರಿ ಕೊರೋನಾ ವೈರಸ್‌ ಹರಡುತ್ತಿರುವ ಹಿನ್ನಲೆಯಲ್ಲಿ ವೈದ್ಯರು,ನರ್ಸ್,ಪ್ಯಾರಾ ಮೆಡಿಕಲ್ ಸಿಬ್ಬಂದಿಗಳಿಗೆ ಮನೆಗಳನ್ನ ಖಾಲಿ ಮಾಡುವಂತೆ ಒತ್ತಾಯ ಮಾಡುತ್ತಿರುವ ಮನೆ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.

ಮನೆ ಖಾಲಿ ಮಾಡುವಂತೆ ಒತ್ತಾಯ ಮಾಡುತ್ತಿರುವ ಮನೆ ಮಾಲೀಕ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ, ಬಿಬಿಎಂಪಿ ಕಮಿಷನರ್,ಎಲ್ಲಾ ಜಿಲ್ಲಾ ಎಸಿಗಳಿಗೆ  ಆರೋಗ್ಯ ಇಲಾಖೆ ಸೂಚನೆ ನೀಡಿದೆ. 

ಮನೆಯಲ್ಲಿರುವುದಲ್ಲದೆ ಕೊರೋನಾಗೆ ಬೇರೆ ಮದ್ದಿಲ್ಲ..! ವೈದ್ಯರೇನ್ ಹೇಳ್ತಾರೆ ನೋಡಿ

ನಿಮ್ಮಿಂದ ನಮಗೂ ಕರೋನಾ ಹರಡತ್ತೆ ಫಸ್ಟ್ ನೀವು ಮನೆ ಖಾಲಿ ಮಾಡಿ ಎಂದು ಮನೆ ಮಾಲೀಕರು ಬಾಡಿದಾರರಿಗೆ ಒತ್ತಾಯ ಹಾಕಿದ್ದರು. ಇದರಿಂದ ಬೇಸತ್ತ ವೈದ್ಯರು, ನರ್ಸ್ ಗಳಿಂದ ಸರ್ಕಾರಕ್ಕೆ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಮನೆ ಖಾಲಿ ಮಾಡುವಂತೆ ಒತ್ತಾಯ ಮಾಡುತ್ತಿರುವ ಮನೆ ಮಾಲೀಕರ ವಿರುದ್ದ ಕಠಿಣ ಕ್ರಮಕ್ಕೆ ಆರೊಗ್ಯ ಇಲಾಖೆ ಮುಂದಾಗಿದೆ. 
 

Follow Us:
Download App:
  • android
  • ios