ಈ ಮೊದಲೇ ಕುಮಾರಸ್ವಾಮಿ ಕೊಟ್ಟ ಸಲಹೆಗೆ BSY ಸರ್ಕಾರ ನಿರ್ಲಕ್ಷ್ಯ,ರೈತ ಸಾವು

ಈ ಮೊದಲೇ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕೊಟ್ಟ ಸಲಹೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳದ ಕಾರಣ ರೈತನೊಬ್ಬ ಬಲಿಯಾಗಿದ್ದಾನೆ.

HD Kumaraswamy Reacts On kalaburagi farmer commited suicide after not able to selling fruit

ಕಲಬುರಗಿ,(ಮಾ.31): ಕೊರೋನಾ ಭೀತಿಯಿಂದಾಗಿ ಇಡೀ ದೇಶವನ್ನೇ ಲಾಕ್​ಡೌನ್​ ಮಾಡಿರುವುದು ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.  ಅನ್ನದಾತರು ತಾವು ಕಷ್ಟಪಟ್ಟು ಬೆಳೆದ ಬೆಳೆಗೆ ಮಾರುಕಟ್ಟೆ ಸಿಗದೆ ರಸ್ತೆಗೆ ಸುರಿಯುತ್ತಿದ್ದಾರೆ.

ಮತ್ತೊಂದೆಡೆ ಕೊರೊನಾ ಸೋಂಕು ತಡೆಗಟ್ಟಲು ದೇಶವನ್ನೇ ಲಾಕ್ ಡೌನ್ ಮಾಡಿದ ಹಿನ್ನೆಲೆಯಲ್ಲಿ ಹಣ್ಣು ಸರಬರಾಜು ಮಾಡಲಾಗದೆ ರೈತನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅಗೋಚರ ಯುದ್ಧದ ನಡುವೆ ಅನ್ನದಾತನ ಉಳಿಸಿಕೊಳ್ಳಲು HDK ಕೊಟ್ಟ ಅದ್ಭುತ ಸಲಹೆ

ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡ ಚಿಂಚೋಳಿ ಗ್ರಾಮದ ರೈತ ಕಲ್ಲಂಗಡಿ ಹಣ್ಣು ಸರಬರಾಜು ಮಾಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 45 ವರ್ಷದ ಚಂದ್ರಕಾಂತ ಬಿರಾದಾರ ಎಂಬುವವರು ಸೋಮವಾರ ರಾತ್ರಿ ತಮ್ಮ ಜಮೀನಿನಲ್ಲಿಯೇ ನೇಣಿಗೆ ಶರಣಾಗಿದ್ದಾರೆ.

ಭವಿಷ್ಯ ನುಡಿದಿದ್ದ ಕುಮಾರಸ್ವಾಮಿ
ಹೌದು....ರಾಜ್ಯದಲ್ಲಿ ರೈತರು ಬೆಳೆದ ಬೆಳೆಗಳನ್ನು ಸರ್ಕಾರವೇ ಖರೀದಿ ಮಾಡಬೇಕು. ಇಲ್ಲ ಅವರಿಗೆ ಬೇರೆ ವ್ಯವಸ್ಥೆ ಮಾಡಬೇಕೆಂದು ಮಾಜಿ ಸೆಇಂ ಕುಮಾರಸ್ವಾಮಿ ಅವರು ಸಿಎಂ ಬಿಎಸ್ ಯಡಿಯೂರಪ್ಪಗೆ ಹೇಳಿದ್ದರು. ಇದೀಗ ಕಲಬುರಗಿ ರೈತ ಆತ್ಮಹತ್ಯೆ ಮಾಡಿಕೊಂಡಿರ ಬಗ್ಗೆ ಎಚ್‌ಡಿಕೆ ಟ್ವೀಟ್ ಮಾಡಿದ್ದಾರೆ. 

ರೈತರ ಸಮಸ್ಯೆ ಬಗೆಹರಿಸದೇ ಹೋದರೆ ಅದರ ಪರಿಣಾಮಗಳು ಭೀಕರವಾಗಿರುತ್ತವೆ ಎಂದು ನಾನು ನಿನ್ನೆಯೇ ಹೇಳಿದ್ದೆ.ಕಲ್ಲಂಗಡಿ ಮಾರಾಟ ಮಾಡಲಾಗದೇ ಕಲಬುರ್ಗಿಯಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಆ ಭೀಕರತೆಗೆ ಸಾಕ್ಷಿ. ಸರ್ಕಾರ ರೈತರ ರಕ್ಷಣೆಗೆ ತಕ್ಷಣವೇ ಧಾವಿಸಬೇಕು. ಯುದ್ಧದ ನಡುವೆ ನಮ್ಮವರನ್ನು ನಾವು ರಕ್ಷಿಸಿಕೊಳ್ಳುವುದೇ ನಾಯಕತ್ವ ಎಂದು ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios