Asianet Suvarna News Asianet Suvarna News

ಅಗೋಚರ ಯುದ್ಧದ ನಡುವೆ ಅನ್ನದಾತನ ಉಳಿಸಿಕೊಳ್ಳಲು HDK ಕೊಟ್ಟ ಅದ್ಭುತ ಸಲಹೆ

ರೈತರ ರಕ್ಷಣೆ ಮಾಡೋಣ/ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್/  ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ/ ಹೈನುಗಾರಿಕೆ ಮಾಡುವವರು ಸಂಕಷ್ಟದಲ್ಲಿ ಇದ್ದಾರೆ/ ಈ ಅಗೋಚರ ಯುದ್ಧದಲ್ಲಿ ನಮ್ಮವರನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕಿದೆ.

coronavirus covid 19 affect karnataka former cm hd kumaraswamy Series tweets
Author
Bengaluru, First Published Mar 30, 2020, 2:52 PM IST

ಬೆಂಗಳೂರು(ಮಾ. 30)  ಕೊರೋನಾ ವಿರುದ್ಧ ಇಡೀ ದೇಶವೇ ಸಮರ ಸಾರಿದೆ. ಈ ಸಂದರ್ಭದದಲ್ಲಿ ಅನ್ನದಾತನನ್ನು ಮರೆಯುವ ಹಾಗಿಲ್ಲ. ರೈತರ ಬಗ್ಗೆ ಕಾಳಜಿ ವಹಿಸಬೇಕಾದ ಅಗತ್ಯದ ಬಗ್ಗೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿ ಎಚ್ಚರಿಸಿದ್ದಾರೆ.

 ಕೊರೊನಾ ವೈರಸ್ ನಮ್ಮ ಮುಂದಿರುವ ಅಗೋಚರ ಯುದ್ಧ. ಇದರ ವಿರುದ್ಧ ಹೋರಾಡುವುದು ಇಂದಿನ ತುರ್ತು. ಆದರೆ ಯುದ್ಧ ನಡೆಯುವಾಗ ನಮ್ಮವರನ್ನು ರಕ್ಷಣೆ ಮಾಡಿಕೊಳ್ಳಬೇಕಿರುವುದೂ ನಮ್ಮ ಕರ್ತವ್ಯ. ಈ ಯುದ್ಧದ ನಡುವೆಯೂ ರೈತರನ್ನು ರಕ್ಷಿಸೋಣ. ಸಾರ್ವಜನಿಕರಿಗೆ ಅಗತ್ಯಗಳನ್ನು ಪೂರೈಸೋಣ ಎಂದಿದ್ದಾರೆ.

ಮಂಡ್ಯದಲ್ಲಿ ಸಪೋಟವನ್ನು ರಸ್ತೆಗೆ ಸುರಿದ, ಚಿಕ್ಕಬಳ್ಳಾಪುರದಲ್ಲಿ ದ್ರಾಕ್ಷಿಯನ್ನು ತಿಪ್ಪೆಗೆ ಹಾಕಿದ, ಶಿವಮೊಗ್ಗದಲ್ಲಿ ಹೈನುಗಾರರಿಂದ ಹಾಲು ನಿಲ್ಲಿಸಿದ, ಕೋಲಾರದಲ್ಲಿ ಟೊಮೆಟೊ ನಾಶ ಮಾಡಿದ ಘಟನೆಗಳು ರೈತರು ಎದುರಿಸುತ್ತಿರುವ ದುಸ್ಥಿತಿಯನ್ನು ವಿವರಿಸುತ್ತಿದೆ.ಇನ್ನು ಕೆಲವೇ ದಿನಗಳಲ್ಲಿ ಇದು ವಿಕೋಪಗೊಳ್ಳುವ ಆತಂಕ ನನ್ನನ್ನು ಕಾಡುತ್ತಿದೆ

ಪೊಲೀಸರಿಗೆ 14 ಮಹತ್ವದ ಸೂಚನೆ ನೀಡಿದ ಕಮಿಷನರ್

ಸರ್ಕಾರ ರೈತರ ಉತ್ಪನ್ನ ಖರೀದಿಗೆ ಶೀಘ್ರವೇ ವ್ಯವಸ್ಥೆ ಮಾಡುವ ಅನಿವಾರ್ಯತೆ ಎದುರಾಗಿದೆ. ಇಲ್ಲದೇ ಹೋದರೆ ಕೃಷಿ ವಲಯ ತೊಂದರೆಗೀಡಾಗುತ್ತದೆ. ಅದರ ಪರಿಣಾಮಗಳು ಭೀಕರ. ಇದು ಕುಟುಂಬಗಳನ್ನು ಆಪೋಷನ ತೆಗೆದುಕೊಳ್ಳುವ ಜೊತೆಗೆ, ಆರ್ಥಿಕತೆಗೆ ತೀವ್ರ ಪೆಟ್ಟು ನೀಡುತ್ತದೆ. ಅದನ್ನು ನೆನೆದು ನನಗಂತೂ ಆತಂಕವಾಗಿದೆ‌ ಎಂದು ನೊಂದು ನುಡಿದಿದ್ದಾರೆ

ಕೊರೊನಾ ವೈರಸ್ ರೋಗ ತಡೆಗೆ  ಗ್ರಾಮಪಂಚಾಯಿತಿ, ವಾರ್ಡ್ ಮಟ್ಟದಲ್ಲಿ ಸ್ವಯಂಸೇವಕರು, ಸಂಘಸಂಸ್ಥೆಗಳು, ಅಧಿಕಾರಿಗಳ ಸಮಿತಿ ರಚನೆಯಾಗಬೇಕು ಎಂಬುದು ನನ್ನ ಸಲಹೆ. ಇದೇ ರೀತಿ ಹಾಪ್ ಕಾಮ್ಸ್, ಕೆಎಂಎಫ್ ಸೇರಿದಂತೆ ಸ್ವಯಂ ಸೇವಕರ ಗುಂಪುಗಳನ್ನು ಬಳಸಿಕೊಂಡು ರೈತರಿಂದ ಉತ್ಪನ್ನಗಳನ್ನು ಸರ್ಕಾರವೇ ಮುಂದೆ ನಿಂತು ಖರೀದಿಸಲಿ. ನಂತರ ಮಾರಾಟ ಮಾಡಲಿ ಎಂಬ ಸಲಹೆಯನ್ನು ಕುಮಾರಸ್ವಾಮಿ ನೀಡಿದ್ದಾರೆ.

ರೈತರಿಂದ ನೇರವಾಗಿ ಖರೀದಿಸಿದ ಉತ್ಪನ್ನಗಳನ್ನು, ನಗರ ವಾರ್ಡ್ ಮಟ್ಟದಲ್ಲಿ ವಿತರಣೆ ಮಾಡಲು ವ್ಯವಸ್ಥೆ ಮಾಡಬೇಕು. ಮಾಲ್ ಗಳನ್ನೂ ಮೀರಿ ಸಾರ್ವಜನಿಕ ಅಗತ್ಯಗಳನ್ನು ಪೂರೈಸುತ್ತಿರುವುದು ಸಣ್ಣ ಪುಟ್ಟ ಅಂಗಡಿಗಳು.ರೈತರ ಉತ್ಪನ್ನಗಳನ್ನು ನೇರವಾಗಿ ಇಂತಹ ಅಂಗಡಿಗಳಿಗೆ ತಲುಪಿಸಲು ವ್ಯವಸ್ಥೆಯೊಂದನ್ನು ಸರ್ಕಾರ ಕೂಡಲೇ ಸೃಷ್ಟಿ ಮಾಡಬೇಕು.

ಹಲವು ರೈತರು, ಕೃಷಿ ಉತ್ಪನ್ನ ಮಾರಾಟಗಾರರು ಈಗಾಗಲೆ ತಮ್ಮ ಪರಿಧಿಯಲ್ಲೇ ಸಾಗಾಟ, ವ್ಯಾಪಾರಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ಉತ್ಪನ್ನ ಸಾಗಿಸುವಾಗ ತಡೆಯುವ, ಅವರಿಂದ ದುಡ್ಡು ಕೇಳುತ್ತಿರುವ ಕುರಿತು ನನಗೆ ಮಾಹಿತಿ ಇದೆ. ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಸರ್ಕಾರ ನಿರ್ಬಂಧ ಹೇರಬಾರದು. ಇದು ರೈತರ ಬದುಕಿನ, ಜನರ ಆಹಾರದ ಪ್ರಶ್ನೆ ಈ ಬಗ್ಗೆ ಸರ್ಕಾರ ಇನ್ನು ಹೆಚ್ಚಿನ ಗಮನ ಹರಿಸಬೇಕು ಎಂದು ಎಚ್‌ಡಿಕೆ ಒತ್ತಾಯ ಮಾಡಿದ್ದಾರೆ.


 

Follow Us:
Download App:
  • android
  • ios