ತುಮಕೂರು(ಮಾ.29): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಇಡೀ ರಾಜ್ಯವೇ ಲಾಕ್‌ಡೌನ್‌ ಆಗಿರುವ ಮಧ್ಯೆ ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಅವರು ತಮ್ಮ ಮೊಮ್ಮಗನ ಜೊತೆ ರಿಮೋಟ್‌ ಕಾರಿನಲ್ಲಿ ಬಿ.ಎಚ್‌.ರಸ್ತೆಯಲ್ಲಿ ಆಟ ಆಡಿದ ವಿಡಿಯೋ ವೈರಲ್‌ ಆಗಿದ್ದು ಶಾಸಕರ ವರ್ತನೆಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.

ಕಫä್ರ್ಯ ಇರುವುದರಿಂದ ಯಾರೂ ಹೊರಗೆ ಬರಬೇಡಿ ಎಂದು ಸರ್ಕಾರ ಆದೇಶಿಸಿದ್ದರೂ ರಸ್ತೆಗಿಳಿದು ತಮ್ಮ ಮೊಮ್ಮಗನ ಜೊತೆ ಆಟವಾಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಜನರು, ಶಾಸಕರಿಗೊಂದು ನ್ಯಾಯ, ಜನಸಾಮಾನ್ಯರಿಗೊಂದು ನ್ಯಾಯವಾ ಎಂದು ಪ್ರಶ್ನಿಸಿದ್ದಾರೆ.

ಭಾರತದಲ್ಲಿ ಹೆಚ್ಚು ಕೊರೋನಾ ಹಬ್ಬಿಸಿದ್ದು ದುಬೈ; ಅಲ್ಲಿಂದ ಆಗಮಿಸಿದವರಲ್ಲೇ ಹೆಚ್ಚು!

ಇಡೀ ರಾಜ್ಯವೇ ಲಾಕ್‌ಡೌನ್‌ ಆಗಿರುವ ಸಂದರ್ಭದಲ್ಲಿ ಬೆಂಗಳೂರು ಹೊನ್ನಾವರ ಹೆದ್ದಾರಿಯಲ್ಲೇ ಶಾಸಕರು ತಮ್ಮ ಮೊಮ್ಮಗನೊಂದಿಗೆ ರಿಮೋಟ್‌ ಕಾರಿನಲ್ಲಿ ಆಟವಾಡುತ್ತಿದ್ದರು.