ಭಾರತ ಲಾಕ್‌ಡೌನ್‌|ಗೋವಾ ಕನ್ನಡಿಗರಿಗೆ ನೆರವಾಗಲು ಮುಂದಾದ ಗೋವಾ ಸರ್ಕಾರ| ಏ.14ರವರೆಗೆ ದೇಶದಲ್ಲಿ ಲಾಕ್‌ಡೌನ್‌ ಆದ ಹಿನ್ನೆಲೆಯಲ್ಲಿ ಆಯಾ ರಾಜ್ಯದಲ್ಲೇ ಇರುವವರು ಅಲ್ಲಿಯೇ ಇರಬೇಕು|ಕಾರ್ಮಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಸ್ಥಳೀಯ ಸರ್ಕಾರದ ಜವಾಬ್ದಾರಿ| 

ಬೆಳಗಾವಿ(ಮಾ.29): ಕೊರೋನಾ ಸೋಂಕು ತಡೆಗಟ್ಟಲು ಭಾರತ ಲಾಕ್‌ಡೌನ್‌ ಆದ ಹಿನ್ನೆಲೆಯಲ್ಲಿ ಕೇಂದ್ರದ ತರಾಟೆಯ ನಂತರ ಗೋವಾ ಕನ್ನಡಿಗರಿಗೆ ನೆರವಾಗಲು ಗೋವಾ ಸರ್ಕಾರ ಮುಂದಾಗಿದೆ. 

ಏ.14ರವರೆಗೆ ದೇಶದಲ್ಲಿ ಲಾಕ್‌ಡೌನ್‌ ಆದ ಹಿನ್ನೆಲೆಯಲ್ಲಿ ಆಯಾ ರಾಜ್ಯದಲ್ಲೇ ಇರುವವರು ಅಲ್ಲಿಯೇ ಇರಬೇಕು. ಕಾರ್ಮಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಸ್ಥಳೀಯ ಸರ್ಕಾರದ ಜವಾಬ್ದಾರಿ ಎಂದು ಕೇಂದ್ರ ಗೋವಾ ಸರ್ಕಾರಕ್ಕೆ ಛಾಟಿ ಬೀಸಿದೆ. 

'ಗೋವಾದಲ್ಲಿ ಆಹಾರ ಸಿಗದೆ ಕಣ್ಣೀರಿಡುತ್ತಿರುವ ಕನ್ನಡಿಗರು'

ಈ ಹಿನ್ನೆಲೆಯಲ್ಲಿ 300 ಜನ ಕನ್ನಡಿಗ ಕಾರ್ಮಿಕರನ್ನು ಗೋವಾ ಅಧಿಕಾರಿಗಳು ತಮ್ಮದೇ ವಾಹನದಲ್ಲಿ ಕರೆದುಕೊಂಡು ಹೋದರು. ಅಲ್ಲದೇ, ಅವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಭರವಸೆಯನ್ನೂ ನೀಡಿದ್ದಾರೆ.