ಕೋಲಾರ(ಏ.04): ಲಾಕ್‌ಡೌನ್‌ ಸಂದರ್ಭದಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಕೆಜಿಎಫ್‌ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ದೂರವಾಣಿ ಮೂಲಕ ಮನವಿ ಮಾಡಿದ ಪ್ರತಿಯೊಬ್ಬರಿಗೂ ಮನೆ ಬಾಗಿಲಿಗೆ ಉಚಿತ ಟ್ಯಾಂಕರ್‌ ನೀರು ಸರಬರಾಜು ಮಾಡಲು ಕ್ರಮ ಕೈಗೊಂಡಿರುವುದಾಗಿ ಶಾಸಕಿ ರೂಪಕಲಾ ಶಶಿಧರ್‌ ತಿಳಿಸಿದರು.

ನಗರದಲ್ಲಿ ಉಚಿತ ನೀರು ಸರಬರಾಜು ಟ್ಯಾಂಕರ್‌ಗೆ ಚಾಲನೆ ನೀಡಿದ ಅವರು, ನೀರಿನ ಸಮಸ್ಯೆ ಇರುವ ಕೆಜಿಎಫ್‌ ನಗರದ ಜನತೆ ದೂರವಾಣಿ ಸಂಖ್ಯೆಗಳಾದ 9141416094, 9900262767, 9481825456, ಗೆ ಹಾಗೂ ಗ್ರಾಮೀಣ ಜನತೆ ದೂರವಾಣಿ ಸಂಖ್ಯೆ- 9036072963, 9900424694 ಗೆ ಕರೆ ಮಾಡಿದರೆ ನೀರು ಕಳುಹಿಸುವುದಾಗಿ ಭರವಸೆ ನೀಡಿದರು.

ಲಾಕ್‌ಡೌನ್‌ ಮುಗಿದ ಮೇಲೂ ಕಟ್ಟುನಿಟ್ಟಿನ ಕ್ರಮಕ್ಕೆ ಸಚಿನ್‌ ಸಲಹೆ

ಲಾಕ್‌ಡೌನ್‌ ಇನ್ನೂ ಏ. 14 ರವರೆಗೂ ಇರುವುದರಿಂದ ಈ ಸಂದರ್ಭದಲ್ಲಿ ನೀರಿನ ಸಮಸ್ಯೆ ಜನರನ್ನು ಕಾಡದಿರಲಿ ಎಂಬ ಸದುದ್ದೇಶದಿಂದ ತಾವೇ ಸ್ವತಃ ಕುಡಿಯುವ ನೀರಿನ ಟ್ಯಾಂಕರ್‌ಗಳನ್ನು ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಒದಗಿಸಲು ನಿರ್ಧರಿಸಿದ್ದಾಗಿ ತಿಳಿಸಿದರು.

ಎರಡೂವರೆ ಸಾವಿರ ಮಂದಿಗೆ ಊಟ:

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಾರ್ಮಿಕರು, ಬಡವರು ಹಸಿವಿನಿಂದ ಕಂಗೆಡಬಾರದು ಎಂಬ ಉದ್ದೇಶದಿಂದ ನಿತ್ಯ ಕೆಜಿಎಫ್‌ ನಗರದಲ್ಲಿ ಎರಡೂವರೆ ಸಾವಿರ ಮಂದಿಗೆ ಊಟದ ವ್ಯವಸ್ಥೆಯನ್ನು ಈಗಾಗಲೇ ಮಾಡಿರುವುದಾಗಿ ತಿಳಿಸಿದರು.

ಕೊರೋನಾ ಮಾರಿಯನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾದ್ದರಿಂದ ನೀರು, ಊಟ ಪಡೆಯುವಾಗ ಮುಂಜಾಗ್ರತೆ ವಹಿಸಲು ಜನತೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಸಚಿನ್, ಕೊಹ್ಲಿ ಸೇರಿ 40 ಕ್ರೀಡಾಪಟುಗಳ ಜೊತೆ ಪ್ರಧಾನಿ ಮೋದಿ ಮಹತ್ವದ ಸಭೆ!

ಈ ಸಂದರ್ಭದಲ್ಲಿ ಮೊದಲಿ ಮುತ್ತು, ರಷೀದ್‌ ಖಾನ್‌, ನಗರಸಭಾ ಸದಸ್ಯರಾದ ಹೊಳಲಿ ಮುನಿಸ್ವಾಮಿ, ಇಂದಿರಾಗಾಂಧಿ, ನಂದಾ, ಸುರೇಶ್‌, ಕರುಣಾಕರನ್‌ ಮತ್ತಿತರರು ಉಪಸ್ಥಿತರಿದ್ದರು.