ಕೋಲಾರ(ಮಾ.29): ಕೊರೋನಾ ಪೋಲಿಸರು ಜೊತೆ ಮಾಜಿ ಯೋಧರು ಮಹಾಮಾರಿ ಕೊರೋನಾ ವೈರಸ್‌ ಬಗ್ಗೆ ಜನಜಾಗೃತಿ ಮೂಡಿಸಿದ ಘಟನೆ ನಗರದಲ್ಲಿ ಇಂದು(ಭಾನುವಾರ) ನಡೆದಿದೆ.

ಕೊರೋನಾ ವೈರಸ್‌ ತಡೆಗಟ್ಟಲು ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಈ ವೇಳೆಯಲ್ಲಿ ಜನರು ಮನೆಯಿಂದ ಹೊರಗಡೆ ಬರಬೇಡಿ ಎಂದು ಸಾಕಷ್ಟು ಮನವಿ ಮಾಡುತ್ತಿದ್ದಾರೆ. ಆದರೆ, ಜನರು ಮಾತ್ರ ಪೊಲೀಸರು ಹಾಗೂ ಸರ್ಕಾರದ ಆದೇಶಗಳನ್ನ ಪಾಲನೆ ಮಾಡುತ್ತಿಲ್ಲ. 

ಭಾರತ ಲಾಕ್‌ಡೌನ್‌: ಕರ್ತವ್ಯದ ಮಧ್ಯೆಯೂ ಮಾನವೀಯತೆ ಮೆರೆದ ಸಬ್‌ಇನ್ಸ್‌ಪೆಕ್ಟರ್

ಹೀಗಾಗಿ ಮಾಜಿ ಯೋಧರು  ಪೋಲಿಸರು ಜೊತೆ ಕೈಜೋಡಿಸಿ ಜನರಿಗೆ ಕೊರೋನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅನಾವಶ್ಯಕವಾಗಿ ರಸ್ತೆಯಲ್ಲಿ ತಿರುಗಾಡುವ ಜನರಿಗೆ ಬುದ್ದಿವಾದ ಹೇಳಿ ಮನೆಯಿಂದ ಹೊರಗಡೆ ಬರದಂತೆ ಮಾಜಿ ಯೋಧರು ಮನವಿ ಮಾಡಿದ್ದಾರೆ. ನಗರದ ವಿವಿಧ ರಸ್ತೆಯಲ್ಲಿ ಸಂಚರಿಸಿ ಯಾರೂ ಮನೆಯಿಂದ ಹೊರಗೆ ಬಾರದಂತೆ ಮಾಜಿ ಯೋಧರು ಜನಜಾಗೃತಿ ಮೂಡಿಸುತ್ತಿದ್ದಾರೆ.