ಮುಂಜಾಗ್ರತೆ ವಹಿಸದೇ ಬಿಸಿಯೂಟದ ಸಾಮಗ್ರಿಗಳನ್ನು ವಿತರಿಸಲು ಬಂದವರಿಗೆ ಗ್ರಾಪಂ ಸದಸ್ಯರ ವಿರೋಧ| ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಡೆದ ಘಟನೆ| ಗ್ರಾಪಂ ಅಭಿವೃದ್ಧಿ ಅಧಿಕಾರಿ, ಬಿಸಿಯೂಟದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವ ಘಟನೆಗಳ ಬಗ್ಗೆ ಬೇಸರ|
ಜೋಯಿಡಾ(ಏ.02): ಸುರಕ್ಷತಾ ಕ್ರಮ ಅನುಸರಿಸದೇ ಬಿಸಿಯೂಟದ ಸಾಮಗ್ರಿ ವಿತರಿಸಲು ಬಂದ ಧಾರವಾಡದ ಏಜೆನ್ಸಿಯ ವ್ಯಕ್ತಿಗಳ ವಾಹನ ತಡೆದು ಜೋಯಿಡಾ ಆಸ್ಪತ್ರೆಯಲ್ಲಿ ಕೊರೋನಾ ಚಿಕಿತ್ಸೆಗೆ ಒಳಪಡಿಸಿದ ಘಟನೆ ಬುಧವಾರ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮುಂಜಾಗ್ರತೆ ವಹಿಸದೇ ಬಿಸಿಯೂಟದ ಸಾಮಗ್ರಿಗಳನ್ನು ವಿತರಿಸಲು ಬಂದವರಿಗೆ ಗ್ರಾಪಂ ಸದಸ್ಯರು ವಿರೋಧ ವ್ಯಕ್ತಪಡಿಸಿದರಲ್ಲದೇ, ಗ್ರಾಪಂ ಅಭಿವೃದ್ಧಿ ಅಧಿಕಾರಿ, ಬಿಸಿಯೂಟದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವ ಘಟನೆಗಳ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.
ಕೊಳೆಯಲಾರಂಭಿಸಿದೆ 70 ಟನ್ ಕಲ್ಲಗಂಡಿ, 300 ಲೋಡ್ ಅನನಾಸು
ಈ ಕುರಿತು ಜೋಯಿಡಾ ತಹಸೀಲ್ದಾರರಿಗೆ ಮಾಹಿತಿ ನೀಡಿದ್ದು, ಹೊರ ಜಿಲ್ಲೆಯಿಂದ ಆಹಾರ ಸಾಮಗ್ರಿ ಪೂರೈಸಲು ಬರುವವರು ಸರಕ್ಷತಾ ಕ್ರಮ ಅನುಸಪರಿಸಲು ಸೂಚಿಸಬೇಕು. ಇಂತಹ ವ್ಯಕ್ತಿಗಳಿಂದ ಆತಂಕದ ವಾತಾವರಣ ನಿರ್ಮಾಣವಾದಲ್ಲಿ ತಾಲೂಕು ಆಡಳಿತವೇ ಜವಾಬ್ದಾರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
