ಲಾಕ್‌ಡೌನ್‌: ಬತ್ತ ಕಟಾವಿಗೂ ಸಮಸ್ಯೆ, ಕಾರ್ಮಿಕರು ಸಿಗದೆ ಕಂಗಾಲಾದ ರೈತ!

ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಬತ್ತ ಕಟಾವಿಗೂ ಸಮಸ್ಯೆ|ಕೊರೋನಾ ಎಫೆಕ್ಟ್‌ನಿಂದ ಬರ್ತಿಲ್ಲ ಕಾರ್ಮಿಕರು | 8 ಲಕ್ಷ ಎಕರೆ ಪ್ರದೇಶದಲ್ಲಿ ಬತ್ತ ಕಟಾವಿನ ಸಮಸ್ಯೆ|ಮಾರಾಟ ಮಾಡುವುದು ದೊಡ್ಡ ಸಮಸ್ಯೆ
 

Farmers Faces Problems due to India LockDown in Koppal District

ಸೋಮರಡ್ಡಿ ಅಳವಂಡಿ

ಕೊಪ್ಪಳ(ಏ.08): ಕೊರೋನಾ ಎಫೆಕ್ಟ್‌ನಿಂದಾಗಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬೇಸಿಗೆ ಹಂಗಾಮಿನ ಬತ್ತ ಕಟಾವಿಗೆ ಬಂದಿದ್ದು, ರಾಶಿ ಮಾಡಿಕೊಳ್ಳುವುದು ರೈತರಿಗೆ ದೊಡ್ಡ ಸಮಸ್ಯೆಯಾಗಿದೆ.

ಸುಮಾರು 8 ಲಕ್ಷ ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಕೋಟ್ಯಂತರ ಕ್ವಿಂಟಲ್‌ ಉತ್ಪಾದನೆಯಾಗುವ ಬತ್ತವನ್ನು ಈಗಾಗಲೇ ರೈತರು ಕಟಾವು ಮಾಡುತ್ತಿದ್ದಾರೆ. ಆದರೆ, ಕಾರ್ಮಿಕರು ಸಿಗದೆ ಮತ್ತು ಕಾರ್ಮಿಕರಿಂದ ಕೆಲಸ ಮಾಡಿಸುವುದು ಸಮಸ್ಯೆಯಾಗಿದೆ. ಆದರೂ ಕಟಾವಿಗೆ ಬಂದಿರುವ ಬತ್ತವನ್ನು ಹಾಗೆ ಬಿಟ್ಟರೆ ಉದುರಿ ನೆಲದ ಪಾಲಾಗುತ್ತದೆ. ಇಂಥ ಸಂಕಷ್ಟದಲ್ಲಿ ರೈತರು ದಿಕ್ಕು ತಿಳಿಯದಾಗಿದೆ.

ಮನೆಯಿಂದ ಹೊರಬಂದವರಿಗೆ ರಾಖಿ ಕಟ್ಟಿದ ಮಂಗಳಮುಖಿಯರು

ಬತ್ತ ಕಟಾವು ಸೇರಿದಂತೆ ಕೃಷಿ ಚಟುವಟಿಕೆಗೆ ಸರ್ಕಾರ ಅನುಮತಿ ನೀಡಿದೆ. ಆದರೆ ಷರತ್ತುಗಳನ್ನು ವಿಧಿಸಿದೆ. ಜತೆಗೆ ಕಾರ್ಮಿಕರು ಕೊರೋನಾದಿಂದ ಬರಲು ಹಿಂದೇಟು ಹಾಕುತ್ತಿರುವುದರಿಂದ ತೀವ್ರ ಸಮಸ್ಯೆಯಾಗುತ್ತದೆ. ಯಂತ್ರದ ಮೂಲಕ ಹೇಗೋ ಕಟಾವು ಮಾಡಲಾಗುತ್ತದೆ. ಆದರೆ, ನಂತರ ರಾಶಿ ಮಾಡುವುದು ಮೊದಲಾದ ಕೆಲಸಗಳು ಸಾಧ್ಯವಾಗುತ್ತಿಲ್ಲ.

ರೈತರ ಮನವಿ:

ಪಪ್ಪಾಯಿ ಬೆಳೆ ಅತ್ಯುತ್ತಮವಾಗಿ ಬಂದಿದೆ. ಸಾವಿರಾರು ರುಪಾಯಿ ಖರ್ಚು ಮಾಡಿ ಬೆಳೆದಿರುವ ಪಪ್ಪಾಯಿ ನಿರೀಕ್ಷೆ ಮೀರಿ ಬೆಳೆದಿದೆ. ಆದರೆ, ಮಾರುಕಟ್ಟೆಯಿಲ್ಲದೆ ಸಮಸ್ಯೆಯಾಗುತ್ತಿದೆ. ಕೂಡಲೇ ಇದಕ್ಕೊಂದು ಪರಿಹಾರ ನೀಡಬೇಕು. ಸರ್ಕಾರವೇ ಪಪ್ಪಾಯಿಗೆ ಮಾರುಕಟ್ಟೆಯನ್ನು ಒದಗಿಸಬೇಕು ಎಂದು ಆಗ್ರಹಿಸಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಪಪ್ಪಾಯಿ ಬೆಳೆಗಾರರು ಮನವಿ ಸಲ್ಲಿಸಿದ್ದಾರೆ.

ಬತ್ತ ಕಟಾವಿಗೆ ಬಂದಿದೆ. ಈ ನಡುವೆ ಮಳೆರಾಯ ಬೇಸಿಗೆಯಲ್ಲಿಯೇ ಅಬ್ಬರಿಸುತ್ತಿದ್ದಾನೆ. ಜತೆಗೆ ಕೊರೋನಾ ಎಫೆಕ್ಟ್ನಿಂದ ಕಾರ್ಮಿಕರು ಬರುತ್ತಿಲ್ಲ. ಹೀಗಾಗಿ, ಬತ್ತವನ್ನು ರಾಶಿ ಮಾಡಿ, ಮನೆಗೆ ತರುವುದು ಸವಾಲು ಆಗಿದೆ ಎಂದು ಹಿಟ್ನಾಳ ಗ್ರಾಮದ ರೈತ ಉಮೇಶ ಪಲ್ಲೇದ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios