ಗದಗ(ಏ.03): ಮದ್ಯಪ್ರಿಯರು ಗುರುವಾರ ಬೀದರ್‌ ಮತ್ತು ಗದಗದ ಲಕ್ಷಾಂತರ ಮೌಲ್ಯದ ಮದ್ಯವನ್ನು ದರೋಡೆ ಮಾಡಿದ್ದಾರೆ. ಗದಗನ ವಲ​ಯದ ಎಂಎಸ್‌ಐಎಲ್‌ನಲ್ಲಿ ದುಬಾರಿ ಮದ್ಯ ಹಾಗೂ 1.50 ಲಕ್ಷ ಬಿಟ್ಟು ಕೇವಲ ಕಡಿಮೆ ಬೆಲೆಯ ಮದ್ಯ ಕಳವು ಮಾಡಿದ್ದಾರೆ.

"

ಬೀದರ್‌ನ ಚಿಟ್ಟಾರಸ್ತೆಯ ವೈನ್‌ಶಾಪ್‌ನಲ್ಲಿ .2 ಲಕ್ಷದ ಮದ್ಯ ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಕುಡುಕರ ನಿಯತ್ತು ಎಂದೇ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿದೆ.

'ಕೊರೋನಾ ವಿಚಾರದಲ್ಲೂ ಬಿಜೆಪಿ ರಾಜಕೀಯ ಮಾಡ್ತಿದೆ'

ಬೆಂಗಳೂರುರಲ್ಲಿ ಮದ್ಯ ಸಿಗದೇ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಮುಂದುವರಿದಿದ್ದು, ಗುರುವಾರವೂ ಬೆಳಗಾವಿಯಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಜ್ಯದಲ್ಲಿ ಮದ್ಯ ಸಿಗದೆ ಮೃತಪಟ್ಟವರ ಸಂಖ್ಯೆ 19ಕ್ಕೇರಿಕೆಯಾಗಿದೆ.

ಸದವತ್ತಿಯ ನಿವಾಸಿ ದೇವೇಂದ್ರಪ್ಪ ಹಡಪದ (42) ಬೆಳಗಾವಿಯ ಅನಗೋಳದ ಬೆಂಡಿಗೇರಿ ಚಾಳದ ಮನೆಯಲ್ಲಿ ಮದ್ಯ ಸಿಗದಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್‌ನೋಟ್‌ ಬರೆದಿಟ್ಟು, ನೇಣಿಗೆ ಶರಣಾಗಿದ್ದಾನೆ.