'ನಂಗೆ ಜನ್ಮ ಕೊಟ್ಟಿದ್ದು ಅಮ್ಮ, ಮರು ಜನ್ಮ ನೀಡಿದ್ದು ಮುಸ್ಲಿಂ ವೈದ್ಯ'
ಕೊರೋನಾ ವಿರುದ್ಧದ ಹೋರಾಟ/ ಲಾಕ್ ಡೌನ್ ಜಾಗೃತಿ ಮೂಡಿಸಿದ ಎಸಿಪಿ ಅನುಷಾ/ ತಮ್ಮ ಜೀವನದ ಘಟನೆಗಳ ಉದಾಹರಣೆ/ ಹೇಗೆ ನಡೆದುಕೊಳ್ಳಬೇಕು ಎಂಬುದ ತಿಳಿಸಿಕೊಟ್ಟ ಅಧಿಕಾರಿ
ಧಾರವಾಡ(ಏ. 09) ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರಗಳ ಜೊತೆ ಸಭೆ ನಡೆಸಿದ ಎಸಿಪಿ ಅನುಷಾ ನೈಜ ಸಂಗತಿಗಳನ್ನು ತೆರೆದಿಟ್ಟಿದ್ದಾರೆ. ಧಾರವಾಡದಲ್ಲಿ ಲಾಕ್ ಡೌನ್ ಆಗಿದೆ ಜನರು ಸುಮ್ಮನೆ ಹೊರ ಬರುತ್ತಿದ್ದಾರೆ. 2002 ರಲ್ಲಿ ಗೋದ್ರಾ ಹತ್ಯಾಕಾಂಡದಲ್ಲಿ ಟ್ರೆನ್ ಬರ್ನಿಂಗ್ ಇಶ್ಯೂ ಆಗಿತ್ತು. ಆ ಸಮಯದಲ್ಲಿ ಯಾವುದೆ ಆಸ್ಪತ್ರೆಗಳು, ಮೆಡಿಕಲ್ ಗಳು ಸ್ಟಾರ್ಟ್ ಆಗಿರಲಿಲ್ಲ ಎಲ್ಲವೂ ಬಂದ್ ಇದ್ದವು. ಆ ಸಮಯದಲ್ಲಿ ಹುಡುಗಿಗೆ ಮುಸ್ಲಿಂ ವೈದ್ಯರೊಬ್ಬರು ಚಿಕಿತ್ಸೆ ಕೊಡುತ್ತಾರೆ. ಟ್ರೀಟ್ ಮೆಂಟ್ ನಿಂದ ಬದುಕಿದ ಹುಡುಗಿ ಬೇರೆ ಯಾರು ಅಲ್ಲ ನಾನೇ.. ಹೌದು ಎಸಿಪಿ ಅನುಷಾ ತಮ್ಮ ಜೀವನದ ಕತೆಯನ್ನು ಹೇಳುತ್ತಾ ಹೋದರು.
ಮಾಸ್ಕ್ ಹೊಲಿಯಲು ಕುಳಿತ ಸಚಿವ ಪತ್ನಿ, ಪುತ್ರಿ
ಸಯ್ಯದ್ ಸಾಧಿಕ್ ಎಂಬುವರು ವೈದ್ಯರು ನನಗೆ ಎರಡನೆಯ ಜೀವ ಕೊಟ್ಟಿದ್ದಾರೆ. ಮೊದಲನೆಯ ಜೀವ ತಾಯಿ ಕೊಟ್ಟರೆ ಎರಡನೇ ಬಾರಿ ನನ್ನ ಬದುಕಿಸಿದ್ದು ಆ ವೈದ್ಯರು ಎಂದು ನೆನಪಿಸಿಕೊಂಡರು.
ಧಾರವಾಡದಲ್ಲಿ ಕೊರೊನಾ ಪಾಸಿಟಿವ್ ಕೆಸ್ ಗಳು ಕೇವಲ ಒಂದೆ ಇದೆ. ಧಾರವಾಡ ಬುದ್ಧಿವಂತರ ನಾಡು, ಸಾಹಿತಿಗಳು ಇರುವ ನಾಡು. ಧಾರವಾಡಕ್ಕೆ ನಾನು ಎಸಿಪಿ ಆಗಿ ಬಂದಿದ್ದೆನೆ. ಮೊನ್ನೆ ಲಾಕ್ ಡೌನ್ ನಡೆದರೂ ಜನರು ಬೀದಿಗೆ ಇಳಿದಿದ್ದಾರೆ ಅವರ ಮೆಲೆ ಲಾಠಿ ಎತ್ತಲೂ ನಮಗೂ ಬೇಸರ ಆಗುತ್ತದೆ. ನಾನೂ ನನ್ನ ಫ್ಯಾಮಲಿಯನ್ನು ಬೆಂಗಳೂರಿನಲ್ಲಿ ಬಿಟ್ಟು ಬಂದಿದ್ದೇನೆ. ಧಾರವಾಡ ಎಸಿಪಿ ಅಂದ್ರೆ ನಿಮ್ಮ ಮನೆಯ ಮಗಳು ಅಂತ ತಿಳಿದುಕ್ಕೊಳ್ಳಿ ಎಂದು ಮನವಿ ಮಾಡಿಕೊಂಡರು.
ನಿಮ್ಮಲ್ಲಿ ಯಾವುದೇ ಸಮಸ್ಯೆ ಆದ್ರೆ ನನಗೆ ತಿಳಿಸಿ. ಧಾರವಾಡದಲ್ಲಿ ಯಾರೇ ತಪ್ಪು ಮಾಡಿದರೆ ನಾನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತ ಧಾರವಾಡದ ಅಂಜುಮನ್ ಸಂಸ್ಥೆಯಲ್ಲಿ ಮುಸ್ಲಿಂ ಮುಖಂಡರುರಿಗೆ ಜಾಗೃತಿ ಮೂಡಿಸಿ ಕೊರೋನಾ ಲಾಕ್ ಡೌನ್ ಸಂದರ್ಭ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿಸಿಕೊಟ್ಟರು.