ಕೊರೋನಾ ಹಾವಳಿ ನೋಡಲಾಗದೆ ಮಾಸ್ಕ್ ಹೊಲಿಯಲು ಕುಳಿತ ಸಚಿವರ ಪತ್ನಿ, ಪುತ್ರಿ!
ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ನಾನಾ ಕ್ರಮ ಕೈಗೊಂಡಿರುವ ಸರ್ಕಾರ, ಅಂತಿಮವಾಗಿ ದೇಶದಾದ್ಯಂತ ಲಾಕ್‌ಡೌನ್ ಹೇರಿದೆ. ಹೀಗಿದ್ದರೂ ಕೊರೋನಾ ಹಾವಳಿ ಮಾತ್ರ ನಿಂತಿಲ್ಲ. ಜನರು ಕೂಡಾ ರಸ್ತೆಗಿಳಿಯುವುದು ನಿಂತಿಲ್ಲ. ಈ ಎಲ್ಲಾ ಜಂಜಾಟಗಳ ನಡುವೆ ಮಾರುಕಟ್ಟೆಯಲ್ಲಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ಕೊರತೆಯೂ ಎದುರಾಗಿದೆ. ಇನ್ನು ಮಾಸ್ಕ್‌ಗಳಿದ್ದರೂ ಅದರ ಬೆಲೆ ಗಗನಕ್ಕೇರಿದೆ. ಹೀಗಿರುವಾಗ ಬಡ ವರ್ಗದ ಜನರಿಗೆ ಮಾಸ್ಕ್ ಖರೀದಿಸುವುದು ಕೊಂಚ ಕಷ್ಟವಾಗಿದೆ. ಇದನ್ನೆಲ್ಲಾ ಗಮನಿಸಿದ ಕೇಂದ್ರ ಸಚಿವರ ಪತ್ನಿ ಹಾಗೂ ಪಪುತ್ರಿ ಒಲಿಗೆ ಮಷೀನ್ ತುಳಿಯಲಾರಂಭಿಸಿದ್ದಾರೆ. ಈ ಮೂಲಕ ಕೈಯ್ಯಾರೆ ಮಾಸ್ಕ್ ತಯಾರಿಸಲು ಸಜ್ಜಾಗಿದ್ದಾರೆ. ಇಲ್ಲಿವೆ ಕೆಲ ಫೋಟೋಸ್
ಹೌದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಪತ್ನಿ ಹಾಗೂ ಪುತ್ರಿ ಕೈಯ್ಯಾರೆ ಹೊಲಿಯುತ್ತಿರುವ ಮಾಸ್ಕ್ ಫೋಟೋಗಳನ್ನು ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಪತ್ನಿ ಹಾಗೂ ಪುತ್ರಿಯ ಈ ಕೆಲಸದ ಕುರಿತು ಬರೆದುಕೊಂಡಿರುವ ಸಚಿವರು ಇವರ ಕೆಲಸದ ಬಗ್ಗೆ ನನಗೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.
ತಮ್ಮ ಕೈಯ್ಯಾರೆ ಮಾಸ್ಕ್ ಹೊಲಿಯುತ್ತಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಪತ್ನಿ ಮೃದುಲಾ.
ಮಾಸ್ಕ್ ಹೊಲಿಯುತ್ತಿರುವ ಸವಚಿವರ ಮಗಳು ನೈಮಿಶಾ
ಕೆಲ ದಿನಗಳ ಹಿಂದೆ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಕುಟುಂಬ ಸದಸ್ಯರು ಮಾಸ್ಕ್ ಹೊಲಿಯುತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಜನರಿಗಾಘಿ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿ. ಸಿಬ್ಬಂದಿಗೆ ಸಹಾಯ ಮಾಡುತ್ತಿರುವ ಪೊಲೀಸ್.
ಒಂದೆಡೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೋನಾ ಎದುರಿಸಲು ಜಂಟಿಯಾಗಿ ಕ್ರಮ ಕೈಗೊಳ್ಳುತ್ತಿದ್ದರೆ, ಇತ್ತ ಗಂಭೀರತೆ ಅರಿಯದ ಜನಸಾಮಾನ್ಯರು ಮಾತ್ರ ರಸ್ತೆಯಲ್ಲಿ ಓಡಾಟ ಮುಂದುವರೆಸಿದ್ದಾರೆ.