Asianet Suvarna News Asianet Suvarna News

ಲಾಕ್‌ಡೌನ್: 13 ಕಿ.ಮೀ ನಡೆದೇ ಆಸ್ಪತ್ರೆಗೆ ಹೋಗುವ ಸಿಬ್ಬಂದಿ..!

ಲಾಕ್‌ಡೌನ್‌ನಿಂದ ಜನತೆ ಹೇಗೆಲ್ಲ ಕಷ್ಟಪಡುತ್ತಿದ್ದಾರೆ ಎಂದು ಹೇಳತೀರದು. ಒಂದು ಕಡೆ ನಿಗದಿತ ಸಮಯದೊಳಗೆ ದಿನಬಳಕೆ ವಸ್ತು ಖರೀದಿಸಲು ಜನತೆ ಕಷ್ಟಪಡುತ್ತಿದ್ದರೆ, ಇಲ್ಲೊಬ್ಬ ಕಾಯಕವೇ ಕೈಲಾಸ ಎಂದ ಶ್ರಮಯೋಗಿ ದುಡಿಮೆಗಾಗಿ 13 ಕಿ.ಮೀ. ನಡೆದುಕೊಂಡು ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

 

D group hospital employee walks 13 kilometers everyday during lockdown
Author
Bangalore, First Published Apr 2, 2020, 7:11 AM IST

ಉಡುಪಿ(ಎ.02): ಲಾಕ್‌ಡೌನ್‌ನಿಂದ ಜನತೆ ಹೇಗೆಲ್ಲ ಕಷ್ಟಪಡುತ್ತಿದ್ದಾರೆ ಎಂದು ಹೇಳತೀರದು. ಒಂದು ಕಡೆ ನಿಗದಿತ ಸಮಯದೊಳಗೆ ದಿನಬಳಕೆ ವಸ್ತು ಖರೀದಿಸಲು ಜನತೆ ಕಷ್ಟಪಡುತ್ತಿದ್ದರೆ, ಇಲ್ಲೊಬ್ಬ ಕಾಯಕವೇ ಕೈಲಾಸ ಎಂದ ಶ್ರಮಯೋಗಿ ದುಡಿಮೆಗಾಗಿ 13 ಕಿ.ಮೀ. ನಡೆದುಕೊಂಡು ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹೌದು, ಕಾರ್ಕಳ ತಾಲೂಕಿನ ಸರ್ಕಾರಿ ಆಸ್ಪತ್ರೆಯ ಡಿ ಗ್ರೂಪ್‌ ನೌಕರ ಬಾಬು ಖಾರ್ವಿ ಎಂಬುವರು ಅಯ್ಯಪ್ಪ ನಗರದಿಂದ ಕಾರ್ಕಳ ನಗರದ ತಾಲೂಕು ಆಸ್ಪತ್ರೆಗೆ ದಿನನಿತ್ಯ ಸುಮಾರು 13 ಕಿ.ಮೀ.ಗಳಷ್ಟುಕಾಲು ನಡಿಗೆ ಮೂಲಕ ಕ್ರಮಿಸಿ ಸೇವೆ ಸಲ್ಲಿಸುತ್ತಿದ್ದಾರೆ.

1ರಿಂದ 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಪಾಸ್: ಕೊರೋನಾದಿಂದ ಸಿಕ್ತು ಗ್ರೇಸ್

ಲಾಕ್‌ಡೌನ್‌ ಘೋಷಣೆ ಬಳಿಕ ಬಸ್‌, ಆಟೋ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಸ್ವಂತ ವಾಹನ ನನ್ನಲ್ಲಿ ಇಲ್ಲ. ಅದನ್ನು ಓಡಿಸುವ ಶಕ್ತಿಯೂ ಇಲ್ಲ. ಬೆಳ್ಳಗ್ಗೆ 6.45ಕ್ಕೆ ಹೊರಟು ನಿಧಾನವಾಗಿ ನಡೆದುಕೊಂಡು ಹೋಗಿ 8.15ರ ಹೊತ್ತಿಗೆ ತಲುಪುತ್ತೇನೆ. ಹಾಗೇ ಕರ್ತವ್ಯ ಮುಗಿದ ಬಳಿಕ ನಡೆದುಕೊಂಡು ಹೋಗಿ ಕತ್ತಲಾಗುವ ಹೊತ್ತಿಗೆ ಮನೆಗೆ ಸೇರುತ್ತೇನೆ. ಬೇರೆ ಏನು ಮಾರ್ಗವಿಲ್ಲ ಎನ್ನುತ್ತಾರೆ ಬಾಬು ಖಾರ್ವಿ.

Follow Us:
Download App:
  • android
  • ios