ಮಡಿಕೇರಿ(ಮಾ.26): ಕೊರೋನಾ ಯಾವಾಗ ಕಡಿಮೆಯಾಗುತ್ತೆ..? ನಾವೆಲ್ಲಾ ಸೇಫ್ ಆಗಿರ್ತೀವಾ..? ನಗರದಲ್ಲಿದ್ದವರು ಮರಳಿ ಮನೆ ಸೇರ್ತಾರಾ..? ಹೀಗೆ ನೂರಾರು ಗೊಂದಲಗಳ ನಡುವೆಯೇ ಕೊಡಗಿನ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಕಾಕತಾಳಿಯವೆಂಬತೆ ಇವರು ಎಚ್‌. ಡಿ. ಕುಮಾರಸ್ವಾಮಿ ಬಗ್ಗೆ ನುಡಿದ ಭವಿಷ್ಯ ಸತ್ಯವಾಗಿತ್ತು.

ಕೊರೊನಾ ಆರ್ಭಟ ಜೂನ್‌ವರೆಗೂ ಇರಲಿದೆ. 26-12-2019 ರಿಂದ 21-06-2020ವರೆಗೆ ಇರುತ್ತೆ ಎಂದುಬ ಮಡಿಕೇರಿಯ ಜ್ಯೋತಿಷಿ ಕೃಷ್ಣ ಉಪಾಧ್ಯ ವ್ಯಾಖ್ಯಾನ ಮಾಡಿದ್ದಾರೆ. 2019 ಡಿಸೆಂಬರ್ ಸೂರ್ಯಗ್ರಹಣ ಸಂದರ್ಭ ಸಮಸ್ಯೆ ಕಂಡುಬಂತು. ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಮನುಕುಲಕ್ಕೆ‌ ಮುಂದೆಯೂ ಸಮಸ್ಯೆ ಆಗಲಿದೆ ಎಂದಿದ್ದಾರೆ.

ಕೊರೋನಾ ತಾಂಡವ: ದೇಶದಲ್ಲಿ ಸಾವಿನ ಸಂಖ್ಯೆ 15ಕ್ಕೇರಿಕೆ, 649 ಮಂದಿಗೆ ಸೋಂಕು!

ಸ್ವಯಂಘೋಷಿತ ಕರ್ಫ್ಯೂ ಜೂನ್‌ ತಿಂಗಳ ಮೂರನೇ ವಾರದವರೆಗೆ ಮುಂದುವರಿಯಲಿದೆ. ರಾಜಾಜ್ಞೆಯನ್ನು ಪಾಲಿಸೋದು ಬಹಳ ಕಷ್ಟ. ಅದರ ಜೊತೆಗೆ ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿ ಊರಿನಲ್ಲಿ ದೇವಸ್ಥಾನಗಳಲ್ಲಿ ಪೂಜೆ ಆಗಬೇಕು ಎಂದು ಸೂಚಿಸಿದ್ದಾರೆ.

ಊರ ದೇವರಿಗೆ ಮೊಸರನ್ನ‌ ನೈವೇದ್ಯ ಮಾಡಬೇಕು. ಊರ ಮಾರಮ್ಮನನ್ನು ಪ್ರಾರ್ಥಿಸಬೇಕು. ಪಂಚಾಯಿತಿ ಮುಖ್ಯಸ್ಥರು ಇದನ್ನ ನಿರ್ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕುಡ್ಲ ಮಂದಿಗೆ ಶಹಬ್ಬಾಸ್..! ಲಾಕ್‌ಡೌನ್‌ ಸೂಚನೆ ಸ್ಟ್ರಿಕ್ಟ್ ಪಾಲನೆ

2018 ಜುಲೈ ತಿಂಗಳಲ್ಲಿ ತಲಕಾವೇರಿಗೆ ಭೇಟಿ ನೀಡಿದ್ದ ಎಚ್ಡಿಕೆ ಬಗ್ಗೆ ಕೃಷ್ಣ ಉಪಾಧ್ಯ ಭವಿಷ್ಯ ನುಡಿದಿದ್ದರು. ತಲಕಾವೇರಿಗೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ. ರಾಜ್ಯಕ್ಕೆ ಅಪಾಯ ಎದುರಾಗುತ್ತೆ ಎಂದಿದ್ದರು. ಆಗಸ್ಟ್‌ನಲ್ಲಿ ಕೊಡಗು ಮಹಾವಿಕೋಪಕ್ಕೆ ಒಳಗಾಗಿತ್ತು. ನಂತರ ಕಾಕತಾಳೀಯ ಎಂಬಂತೆ ಅಧಿಕಾರ ಕಳೆದುಕೊಂಡಿದ್ದರು.