News Hour: ಮತದಾನ ಮುಗೀತು.. ಇನ್ನು ರಿಸಲ್ಟ್‌ನದ್ದೇ ಟೆನ್ಷನ್!
ಕರ್ನಾಟಕದ ಮೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಶಾಂತಿಯುತವಾಗಿ ಮುಕ್ತಾಯವಾಗಿದೆ. ಚುನಾವಣೆ ಮುಗಿದ ಬೆನ್ನಲ್ಲಿಯೇ ಅಭ್ಯರ್ಥಿಗಳಿಗೆ ರಿಸ್ಟಲ್ ಟೆನ್ಶನ್ ಶುರುವಾಗಿದೆ.
ಬೆಂಗಳೂರು (ನ.13): ಸಂಡೂರು,ಶಿಗ್ಗಾಂವಿ, ಚನ್ನಪಟ್ಟಣದಲ್ಲಿ ಶಾಂತಿಯುತ ಮತದಾನವಾಗಿದೆ. 3 ಕ್ಷೇತ್ರದಲ್ಲಿ 45 ಅಭ್ಯರ್ಥಿಗಳ ಹಣೆಬರಹವೀಗಿ ಇವಿಎಂ ಸೇರಿದೆ. ಮೂರು ಪಕ್ಷಗಳಿಗೂ ದಾಖಲೆ ಮತದಾನದ್ದೇ ಟೆನ್ಷನ್ ಶುರುವಾಗಿದೆ.
ಇನ್ನೊಂದೆಡೆ, ಮುಡಾ ಹಗರಣದಲ್ಲಿ ಇ.ಡಿ ತನಿಖೆ ಸಿಎಂ ಬುಡಕ್ಕೇ ಬಂದಿದೆ. ಸಿದ್ದರಾಮಯ್ಯ ಖಾಸಗಿ ಪಿಎ, ಕಾಂಗ್ರೆಸ್ ಸಂಸದನ ವಿಚಾರಣೆ ನಡೆಸಿದೆ. ಮುಖ್ಯಮಂತ್ರಿ ಪ್ರಭಾವಕ್ಕೆ ಮಹತ್ವದ ಸಾಕ್ಷ್ಯ ಸಿಕ್ಕೀತಾ ಎನ್ನುವ ಅನುಮಾನ ಕಾಡಿದೆ.
ಖಂಡ್ರೆ ಸಾಹೇಬ್ರ ಘನಂದಾರಿ ಐಡಿಯಾ, ಪಶ್ಚಿಮಘಟ್ಟದ ನದಿ ನೀರು ಕುಡೀತಾ ಇದ್ರೆ ಬೀಳುತ್ತೆ ಗ್ರೀನ್ ಸೆಸ್!
ರಾಷ್ಟ್ರಮಟ್ಟದಲ್ಲಿ ಬುಲ್ಡೋಜರ್ ನ್ಯಾಯಕ್ಕೆ ಸುಪ್ರೀಂಕೋರ್ಟ್ ಬ್ರೇಕ್ ಹಾಕಿದೆ. ನೋಟಿಸ್ ನೀಡದೇ ಆರೋಪಿಗಳ ಮನೆ ನೆಲಸಮ ಮಾಡುವಂತಿಲ್ಲ ಎಂದು ತಿಳಿಸಿದೆ. ಆರೋಪಿಗೂ ಬದುಕುವ ಹಕ್ಕಿದೆ ಎಂದ ದ್ವಿಸದಸ್ಯ ಪೀಠ ಹೇಳಿದೆ.